March 15, 2026
Sunday, March 15, 2026
spot_img

ರಾಣೆಬೆನ್ನೂರಿನಲ್ಲಿ ಹುಚ್ಚು ನಾಯಿಗಳ ಹಾವಳಿ, 15ಕ್ಕೂ ಹೆಚ್ಚು ಜನರಿಗೆ ಕಡಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಡೀ ರಾಜ್ಯದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿದೆ, ಇದೀಗ ಹಾವೇರಿಯ ರಾಣೆಬೆನ್ನೂರಿನಲ್ಲಿ ಹುಚ್ಚುನಾಯಿಗಳ ದಾಳಿಗೆ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ರಾಣೆಬೆನ್ನೂರಿನ ಉಮಾಶಂಕರ್‌ ಮತ್ತು ಗೌರಿಶಂಕರ ನಗರದಲ್ಲಿ ಹುಚ್ಚು ನಾಯಿಗಳು ಜನರ ಮೇಲೆ ಡೆಡ್ಲಿ ಅಟ್ಯಾಕ್‌ ಮಾಡಿವೆ. ಬಾಲಕನೊಬ್ಬ ಅಟ್ಯಾಕ್‌ನಿಂದ ಪಾರಾಗಿದ್ದಾನೆ. ಮನೆಯ ಮುಂದೆ ಈ ಬಾಲಕ ಆಟವಾಡುತ್ತಾ ನಿಂತಿದ್ದ ವೇಳೆ ಶ್ವಾನಗಳು ಏಕಾಏಕಿ ಅಟ್ಯಾಕ್‌ ಮಾಡಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಏರಿಯಾದಲ್ಲಿ ಓಡಾಡುತ್ತಿದ್ದ ಮಹಿಳೆಯರು, ವೃದ್ಧರ ಮೇಲೆ ನಾಯಿಗಳು ದಾಳಿ ನಡೆಸಿವೆ. ಈ ಬಗ್ಗೆ ಎಷ್ಟು ದೂರು ಕೊಟ್ಟರೂ ನಗರಸಭೆ ಕ್ಯಾರೆ ಎಂದಿಲ್ಲ ಎಂದು ಜನರು ದೂರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !