ಅಪರೂಪದ ರೋಗಗಳಿಗೆ ಬರಲಿದೆ ಮೇಡ್ ಇನ್ ಇಂಡಿಯಾ ಔಷಧ, ದರದಲ್ಲಾಗಲಿದೆ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಜನಸಂಖ್ಯೆಯಲ್ಲಿ ಶೇ. 6-8 ರಷ್ಟು ಜನರನ್ನು ಬಾಧಿಸುವ 14 ಅಪರೂಪದ ಕಾಯಿಲೆಗಳಿಗೆ ‘ಮೇಡ್ ಇನ್ ಇಂಡಿಯಾ’ ಔಷಧಗಳು ಶೀಘ್ರದಲ್ಲಿಯೇ ಲಭ್ಯವಾಗಲಿವೆ ಎಂದು ಕೇಂದ್ರ ತಿಳಿಸಿದೆ.

ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಹೆಚ್ಚು ಹಣವನ್ನು ಖರ್ಚು ಮಾಡದೇ ಉತ್ತಮ ಫಲಿತಾಂಶ ನೀಡುವ ಚಿಕಿತ್ಸೆ ಬಗ್ಗೆಯೂ ಸರ್ಕಾರ ಆಲೋಚಿಸುತ್ತಿದ್ದು, ಕುಡುಗೋಲು ಕಣ ರೋಗ( ಸಿಕಲ್ ಸೆಲ್)ಕ್ಕೂ ಔಷಧ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.

ಈ ಅಪರೂಪದ ಕಾಯಿಲೆಗಳ ಪೈಕಿ ಭಾರತದಲ್ಲಿ 8.4-10 ಕೋಟಿ ಪ್ರಕರಣಗಳು ವರದಿಯಾಗುತ್ತಿವೆ ಎಂದು
ಅಂದಾಜಿಸಲಾಗಿದ್ದು, ಈ ರೀತಿ ಅಪರೂಪದ ಕಾಯಿಲೆಗಳಿಗೆ ನೀಡುವ ಔಷಧಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಔಷಧ ದುಬಾರಿಯಾಗಿದೆ. ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಪೋಷಕರು ಹಣಕ್ಕಾಗಿ ಕ್ರೌಡ್ ಫಂಡಿಂಗ್ ಮೇಲೆಯೇ ಅವಲಂಬಿತರಾಗಿರುತ್ತಾರೆ, ಆದರೆ ಇನ್ಮುಂದೆ ಔಷಧಗಳು ಭಾರತದಲ್ಲೇ ತಯಾರಾಗಲಿದ್ದು, ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತ ನಿರ್ಮಿತ ಔಷಧಗಳ ಬಿಡುಗಡೆಯಿಂದ ವೆಚ್ಚ ಕಡಿಮೆಯಾಗಲಿದ್ದು, ಕೇಂದ್ರವೂ ಕೂಡ ಅಪರೂಪದ ಕಾಯಿಲೆಗಳಿಗೆಂದು 50 ಲಕ್ಷ ರೂಪಾಯಿ ಮೀಸಲಿಟ್ಟಿದೆ. ಆದರೆ ಇದರ ವ್ಯಾಪ್ತಿ ಸೀಮಿತವಾಗಿದೆ.
ಭಾರತ ನಿರ್ಮಿತ ಪರಿಣಾಮಕಾರಿ ಜೆನೆರಿಕ್ ಔಷಧಗಳಲ್ಲಿ ಮೊದಲನೆಯದ್ದು ಶೀಘ್ರವೇ ಲಭ್ಯವಾಗಲಿದ್ದು, ಇನ್ನುಳಿದದ್ದು ಮುಂದಿನ ವರ್ಷ ಲಭ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!