ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ ಮುಖ್ಯಸ್ಥರಾಗಿ ಮಾಧಬಿ ಪುರಿ ಬುಚ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರಾಗಿ ಮಾಧಬಿ ಪುರಿ ಬುಚ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಸೆಬಿ ಮುಖ್ಯಸ್ಥರಾಗಿದ್ದ ಅಜಯ್ ತ್ಯಾಗಿ ಅವರ ಅಧಿಕಾರವಧಿ ಇಂದಿಗೆ ಕೊನೆಯಾಗಿದ್ದು, ಇದೀಗ ಮೂರು ವರ್ಷದ ಅವಧಿಗೆ ಮಹಿಳೆಯೊಬ್ಬರು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥೆಯಾಗಲಿದ್ದಾರೆ ಎಂದು ಹಣಕಾಸು ಸಚಿವಾಲಯ ಮೂಲಗಳು ಸ್ಪಷ್ಟಪಡಿಸಿವೆ.
ಮಾಧಬಿ ಪುರಿ ಬುಚ್ ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರಾಗಿದ್ದು, ಮಾರುಕಟ್ಟೆ ನಿಯಂತ್ರಕದಿಂದ ಸ್ಥಾಪಿಸಲಾದ ಹೊಸ ತಂತ್ರಜ್ಞಾನ ಸಮಿತಿಯನ್ನು ಮುನ್ನಡೆಸಲು ಹಿಂದೆ ನಾಮನಿರ್ದೇಶನ ಮಾಡಲಾಗಿತ್ತು.
ಐಸಿಸಿ ಬ್ಯಾಂಕ್ ಮೂಲಕ ವೃತ್ತಿ ಜೀವನ ಆರಂಭಿಸಿದ ಬುಚ್, ಐಸಿಸಿಐ ಸೆಕ್ಯುರಿಟೀಸ್ ನ ಎಂಡಿ ಮತ್ತು ಸಿಇಒ ಆಗಿ ಫೆಬ್ರವರಿ 2009 ರಿಂದ ಮೇ 2011ರವರೆಗೂ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!