ಕಮರಿದ ತಾಯಿಯ ವಿಶ್ವಾಸ: ಬದುಕುಳಿಯಲಿಲ್ಲ ಬೋರ್‌ವೆಲ್‌ಗೆ ಬಿದ್ದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ಬೇತುಲ್‌ನಲ್ಲಿ ಬೋರ್‌ವೆಲ್‌ಗೆ ಬಿದ್ದ 8 ವರ್ಷದ ತನ್ಮಯ್ ಸಾಹು ಸಾವನ್ನಪ್ಪಿದ್ದಾನೆ. ಮಾಂಡವಿ ಗ್ರಾಮದಲ್ಲಿ ಡಿಸೆಂಬರ್ 6 ರಂದು 55 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ 8 ವರ್ಷದ ತನ್ಮಯ್ ಸಾಹು ಅವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಬಾಲಕ ಸಾವನ್ನಪ್ಪಿರುವುದಾಗಿ ಬೇತುಲ್ ಜಿಲ್ಲಾಡಳಿತ ತಿಳಿಸಿದೆ. ಸತತ ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ಮೂಲಕ ಬಾಲಕನನ್ನು ರಕ್ಷಿಸಲು ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿದೆ. ಬೋರ್‌ವೆಲ್‌ಗೆ ಬಿದ್ದ ಬಾಲಕ ಜೀವಂತವಾಗಿ ಬರಲಿಲ್ಲ.

8 ವರ್ಷದ ತನ್ಮಯ್ ಸಾಹು ಡಿಸೆಂಬರ್ 6 ರಂದು ಸಂಜೆ 5 ಗಂಟೆ ಸುಮಾರಿಗೆ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಬೋರ್‌ವೆಲ್‌ಗೆ ಬಿದ್ದಿದ್ದು, ಗಂಟೆಯೊಳಗೆ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಗೃಹರಕ್ಷಕ ದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಕಾರ್ಯನಿರತರಾಗಿದ್ದರು.

ತನ್ಮಯ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಬೆತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ. ಸ್ಥಳದಲ್ಲಿ ಹೆತ್ತವಳ ಆಕ್ರಂದನ ಮಾತ್ರ ಅಷ್ಟಿಷ್ಟಲ್ಲ. ನನ್ನ ಮಗುವನ್ನು ನನಗೆ ಕೊಡು, ಅದು ಏನೇ ಇರಲಿ, ನಾಯಕ ಅಥವಾ ಅಧಿಕಾರಿಯ ಮಕ್ಕಳಾಗಿದ್ದರೆ ಇಇಷ್ಟು ಸಮಯ ತೆಗೆದುಕೊಳ್ಳುತ್ತಿದ್ರಾ ಎಂದು ಎದೆಬಡಿದುಕೊಳ್ಳುತ್ತಾ ಜ್ಯೋತಿ ಸಾಹು ಗೋಳಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!