ವೈರಲ್ ಆಗ್ತಿದೆ ಸಿಪಿಆರ್ ಮಾಡಿ ಹಾವಿಗೆ ಜೀವ ಕೊಟ್ಟ ಪೊಲೀಸಪ್ಪನ ವಿಡಿಯೋ‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ಎಂದಾದರೂ ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಪ್ರದರ್ಶನವನ್ನು ನೋಡಿದ್ದೀರಾ? ಹೃದಯದ ಕಾರ್ಯವು ಇದ್ದಕ್ಕಿದ್ದಂತೆ ನಿಂತುಹೋದಾಗ.. ಸ್ಥಗಿತಗೊಂಡವರಿಗೆ ತಕ್ಷಣವೇ ರೋಗಿಯ ಬಾಯಿಗೆ ಬಾಯಿಟ್ಟು ಊದುತ್ತಾ ಗಾಳಿಯನ್ನು ಪಂಪ್ ಮಾಡುವುದು. ಹೆಚ್ಚಾಗಿ ಈ CPR ಅನ್ನು ಜನರ ಮೇಲೆ ಮಾಡೋದು ನೋಡಿದ್ದೇವೆ. ಆದರೆ ಪೊಲೀಸ್ ಪೇದೆಯೊಬ್ಬರು ಹಾವಿಗೆ ಸಿಪಿಆರ್ ಮಾಡಿ ಪ್ರಾಣ ಉಳಿಸಿದ್ದಾರೆ. ಆಶ್ಚರ್ಯ ಎನಿಸಿದರೂ ಇದು ನಿಜ. ಈ ವಿಡಿಯೋ ನೋಡಿ.

ಮಧ್ಯಪ್ರದೇಶ ರಾಜ್ಯದ ಚಿಂದ್ವಾರ ಜಿಲ್ಲೆಯ ಪೊಲೀಸ್ ಪೇದೆ ಅತುಲ್ ಶರ್ಮಾ ಅವರು ಪಚ್ಮರ್ಹಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ದಸರಾ ಪ್ರಯುಕ್ತ ಕರ್ತವ್ಯದಲ್ಲಿದ್ದ ನರ್ಮದಾಪುರಂನ ತವಾ ಕಾಲೋನಿಯ ನಿವಾಸಿಯೊಬ್ಬರ ಮನೆಗೆ ಹಾವು ನುಗ್ಗಿದೆ. ಮಾಹಿತಿ ಪಡೆದ ತಕ್ಷಣ ಶರ್ಮಾ ಸ್ಥಳಕ್ಕೆ ಧಾವಿಸಿದ್ದರು. ಅಷ್ಟರಲ್ಲಾಗಲೇ ಪೈಪ್ ನಲ್ಲಿ ಅಡಗಿಕೊಂಡಿದ್ದ ಹಾವಿಗೆ ಕುಟುಂಬ ಸದಸ್ಯರು ಅದಾಗಲೇ ಕ್ರಿಮಿನಾಶಕ ಸೇರಿಸಿದ್ದ ಬಕೆಟ್ ನೀರು ಸುರಿದಿದ್ದರಿಂದ ಹಾವು ಮೂರ್ಛೆ ಹೋಗಿತ್ತು. ಅತುಲ್ ಶರ್ಮಾ ಕೂಡಲೇ ಹಾವನ್ನು ಹೊರತೆಗೆದು ಅದರ ಬಾಯಿ ತೊಳೆದು ಸಿಪಿಆರ್ ಮಾಡಿದರು.

ಸ್ವಲ್ಪ ಹೊತ್ತಿನ ಬಳಿಕ ಹಾವಿಗೆ ಪ್ರಜ್ಞೆ ಬಂತು. ಆ ನಂತರ ಶರ್ಮ ಅದನ್ನು ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅತುಲ್ ಶರ್ಮಾ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಹಾವನ್ನು ರಕ್ಷಿಸಲು ಕಾನ್ಸ್‌ಟೇಬಲ್‌ ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!