‘ದಿ ಕಾಶ್ಮೀರ್​ ಫೈಲ್ಸ್’​​ ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ಘೋಷಣೆ ಮಾಡಿದ ಮಧ್ಯಪ್ರದೇಶ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಆಧಾರಿತ ಸಿನಿಮಾ ‘ದಿ ಕಾಶ್ಮೀರ್​ ಫೈಲ್ಸ್’​​ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಧ್ಯಪ್ರದೇಶ ಸರ್ಕಾರದಿಂದ ಚಿತ್ರ ವೀಕ್ಷಣೆ ಮಾಡಲು ಅಲ್ಲಿನ ಪೊಲೀಸರಿಗೆ ರಜೆ ಘೋಷಣೆ ಮಾಡಿದೆ.
ಈಗಾಗಲೇ ಸಿನಿಮಾಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ತೆರಿಗೆ ವಿನಾಯತಿ ನೀಡಿದ್ದು, 2 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ.
ನಿನ್ನೆ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್ ಈ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯ್ತಿ ನೀಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಅಲ್ಲಿನ ಗೃಹ ಸಚಿವ ನರೋತ್ತಮ್​ ಮಿಶ್ರಾ, ಸಿನಿಮಾ ವೀಕ್ಷಣೆ ಮಾಡಲು ರಾಜ್ಯದ ಪೊಲೀಸರಿಗೆ ರಜೆ ನೀಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿ 1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ವಿಷಯವಾಗಿದೆ. ಈ ಚಿತ್ರಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!