ಮದರಸಾದ ಮಕ್ಕಳು ನಮ್ಮ ಎರಡನೇ ಹಂತದ ರಕ್ಷಣಾ ಪಡೆ: ಪಾಕ್ ರಕ್ಷಣಾ ಸಚಿವ ಆಸಿಫ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದರಸಾದ ಮಕ್ಕಳು ನಮ್ಮ ಎರಡನೇ ಹಂತದ ರಕ್ಷಣಾ ಪಡೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್‌ ಹೇಳಿಕೆ ನೀಡಿದ್ದಾರೆ.

ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪಾಕ್‌ ಸಚಿವ ಆಸಿಫ್, ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದೇಶದ ಎರಡನೇ ಹಂತದ ರಕ್ಷಣಾ ಪಡೆ ಎಂದು ತಿಳಿಸಿದ್ದಾರೆ.

ಮದರಸ್ ನಲ್ಲಿ ಓದುತ್ತಿರುವ ಯುವಕರನ್ನು ಸಮಯ ಬಂದಾಗ ಅಗತ್ಯವಿರುವಂತೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ನಾವು ಭಾರತದ ಡ್ರೋನ್‌ ದಾಳಿಯನ್ನು ತಡೆದಿಲ್ಲ. ನಮ್ಮ ಸ್ಥಳಗಳ ಬಗ್ಗೆ ಮಾಹಿತಿ ಸೋರಿಕೆಯಾಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿದೆವು. ನಿನ್ನೆ ಭಾರತವು ನಮ್ಮ ಸ್ಥಳಗಳನ್ನು ಪತ್ತೆಹಚ್ಚಲು ಡ್ರೋನ್‌ ದಾಳಿ ಮಾಡಿತು. ನಾನು ತಾಂತ್ರಿಕ ವಿಷಯಗಳನ್ನು ವಿವರಿಸಲು ಸಾಧ್ಯವಿಲ್ಲ ಎಂದು ಪಾಕ್‌ ರಕ್ಷಣಾ ಸಚಿವ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಹೇಳಿಕೆ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!