ಉಡೀಸ್ ಆದ ಅಲ್-ಖೈದಾ ಕಚೇರಿಗಳಾಗಿದ್ದ ಗೋಲ್ಪಾರಾ ಜಿಲ್ಲೆಯ ಮದರಸಾಗಳು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದರಸಾಗಳು ಅಲ್-ಖೈದಾ ಕಚೇರಿಗಳಾಗಿದ್ದ ಕಾರಣ ಅವುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ಮದರಾಸಗಳನ್ನು ಕೆಡವಿದ ಒಂದು ದಿನದ ನಂತರ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬಿಸ್ವಾ ಶರ್ಮಾ ಈಗಾಗಲೇ ನಾವು 2-3 ಮದರಸಾಗಳನ್ನು ಕೆಡವಿದ್ದೇವೆ. ಉಳಿದ ಮದರಾಸಗಳನ್ನು ಕೆಡವಲು ಸಾರ್ವಜನಿಕರು ಬರುತ್ತಿದ್ದಾರೆ. ಅಲ್ಲದೇ ಅಲ್-ಖೈದಾ ಕೆಲಸ ನಡೆಯುವ ಮದರಸಾ ನಮಗೆ ಬೇಡ, ಅದು ಮದರಸಾಗಳ ಸ್ವರೂಪವನ್ನು ಬದಲಾಯಿಸುತ್ತದೆ ಎಂದು ಮುಸ್ಲಿಂ ಸಮುದಾಯದವರು ಹೇಳಿದ್ದಾರೆ ಎಂದರು.

ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಪಖುರಿಯಾ ಚಾರ್‌ನ ಸ್ಥಳೀಯ ನಿವಾಸಿಗಳು ಮಂಗಳವಾರ ಮದರಸಾವನ್ನು ನೆಲಸಮಗೊಳಿಸಿದ ನಂತರ ಧರ್ಮಗುರುವನ್ನು ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿದ ನಂತರ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ.

ಸ್ಥಳೀಯರು ಮದರಸಾವನ್ನು ಕೆಡವಲು ಮುಂದಾದರೂ, ಇದರಲ್ಲಿ ಸರ್ಕಾರ ಭಾಗಿಯಾಗಿಲ್ಲ. ಬಂಧಿತನು ಜಿಹಾದಿ ಮದರಸಾದಲ್ಲಿ ಶಿಕ್ಷಕನಾಗಿರುವುದು ಅಚ್ಚರಿ ಮೂಡಿಸಿದೆ. ಜನರು ಜಿಹಾದಿ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಗೋಲ್ಪಾರಾ ಪೊಲೀಸ್ ವರಿಷ್ಠಾಧಿಕಾರಿ ವಿ.ವಿ ರಾಕೇಶ್ ರೆಡ್ಡಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!