ಮಂಗಳೂರಿನಲ್ಲಿ ‘ಮಕ್ಕಳ ಹಬ್ಬ’: ರಸಮಂಜರಿಗೆ ಮನಸೋತರು, ಜಾದೂ ಕಂಡು ಬೆರಗಾದರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ‘ಕನ್ನಡ ಶಾಲಾ ಮಕ್ಕಳ ಹಬ್ಬ’ದಲ್ಲಿ ಮೊದಲ ದಿನದ ಕಾರ್ಯಕ್ರಮ ನೆರೆದವರಿಗೆ ಖುಷಿ ನೀಡಿತು.

ರವೀಂದ್ರ ಪ್ರಭು ಮತ್ತು ತಂಡದಿಂದ ರಸಮಂಜರಿ, ಅಂತಾರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಜಾದೂ ಕಾರ್ಯಕ್ರಮ, ಆಳ್ವಾಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಲ್ಲಕಂಬ, ತುಳು ಲಿಪಿ ಪರಿಚಯ, ಉದ್ಯೋಗಾವಕಾಶ ಮಾರ್ಗದರ್ಶಿ, ವಿಜ್ಞಾನ ಮಾದರಿಗಳ ಪ್ರದರ್ಶನ, ಆಟದ ಬಯಲು, ಮಂಗಳೂರಿನ ಶಾರದಾ ವಿದ್ಯಾಲಯ ಹಾಗೂ ಪೊಳಲಿ ಟೈಗರ್ಸ್ ಹುಲಿ ಕುಣಿತ ಪ್ರದರ್ಶನ, ಗೊಂಬೆ ವೇಷಧಾರಿಗಳ ತಂಡ ಮಕ್ಕಳನ್ನು ಮನರಂಜಿಸಿದವು.

ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ವೇದಿಕೆಗೆ ಪಂಜೆ ಮಂಗೇಶ ರಾವ್ ಅವರ ಹೆಸರನ್ನಿಡಲಾಗಿತ್ತು. ಮೊದಲ ದಿನದ ಮೊದಲ ಸಂವಾದ ಗೋಷ್ಠಿ ಶಿವರಾಮ ಕಾರಂತ ವೇದಿಕೆಯಲ್ಲಿ ಜರುಗಿತು. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಕುದ್ಮುಲ್ ರಂಗರಾವ್ ಹೆಸರಿನಲ್ಲಿ ವೇದಿಕೆ ಕಲ್ಪಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!