ದೇಹಕ್ಕೆ ಅಗತ್ಯವಾದ ಖನಿಜಗಳಲ್ಲಿ ಮೆಗ್ನೀಸಿಯಂ ಕೂಡ ಒಂದು. ಬಲವಾದ ಮೂಳೆಗಳು, ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಣ, ಸ್ನಾಯುಗಳು ಹಾಗೂ ನರಗಳನ್ನು ಆರೋಗ್ಯವಾಗಿಡುವ ಕಾರ್ಯಗಳಿಗೆ ಮೆಗ್ನೀಸಿಯಂ ಅವಶ್ಯಕ.
ದೇಹದಲ್ಲಿ ಮೆಗ್ನೀಸಿಯಂ ಕೊರತೆಯಿದ್ದರೆ ವಾಕರಿಕೆ, ವಾಂತಿ, ಸ್ನಾಯುಗಳ ದೌರ್ಬಲ್ಯ, ನಡುಕ ಹಾಗೂ ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬರುತ್ತವೆ. ಮೆಗ್ನೀಸಿಯಂ ಕೊರತೆಯಿಂದ ಹೃದ್ರೋಗ, ಸಿಂಗಲ್ಟನ್ ಹಾಗೂ ಟೈಪ್-2 ಮಧುಮೇಹದಂತಹ ಕಾಯಿಲೆಗಳೂ ಉಂಟಾಗುತ್ತವೆ. ಯಾವೆಲ್ಲ ಪದಾರ್ಥಗಳಲ್ಲಿ ಮೆಗ್ನೀನಿಶಂ ಇದೆ? ಇಲ್ಲಿದೆ ಡೀಟೇಲ್ಸ್
ಪಾಲಕ್: ಪಾಲಕ್ ಮೆಗ್ನೀಸಿಯಂನ ಕಣಜ. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ 157 ಮಿಲಿಗ್ರಾಂ ಮೆಗ್ನೀಸಿಯಂ ದೊರೆಯುತ್ತದೆ. ಪಾಲಕ್ ಅನ್ನು ದೈನಂದಿನ ಆಹಾರದಲ್ಲಿ ಸೇರಿಸಿದರೆ, ನಿಮಗೆ ಶೇ.40ರಷ್ಟು ಮೆಗ್ನೀಸಿಯಂ ಲಭಿಸುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣ ಹಾಗೂ ವಿಟಮಿನ್ ಸಿ ದೇಹದಲ್ಲಿ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ ಹಾಗೂ ಆಯಾಸ ನಿವಾರಿಸಲು ಸಹಾಯ ಮಾಡುತ್ತದೆ.
ಬಾದಾಮಿ: ಒಂದು ಹಿಡಿ ಬಾದಾಮಿಯಲ್ಲಿ 76 ಮಿಗ್ರಾಂ ಮೆಗ್ನೀಸಿಯಮ್ ಲಭಿಸುತ್ತದೆ. ಆರೋಗ್ಯಕರ ಕೊಬ್ಬುಗಳು ಹಾಗೂ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಬಾದಾಮಿ ದಿನವಿಡೀ ನಿರಂತರ ಶಕ್ತಿ ಒದಗಿಸುತ್ತದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ (2016) ಪ್ರಕಟಿಸಿದ ಅಧ್ಯಯನವು, ಬಾದಾಮಿ ತಿನ್ನುವುದರಿಂದ ಶಕ್ತಿ ದೊರೆಯುತ್ತದೆ ಹಾಗೂ ಹಸಿವು ಕಡಿಮೆಯಾಗುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.
ಆವಕಾಡೊ : ಒಂದು ಆವಕಾಡೊ ಹಣ್ಣು ಸುಮಾರು 58 ಮಿಗ್ರಾಂ ಮೆಗ್ನೀಸಿಯಂ ಜೊತೆಗೆ ಪೊಟ್ಯಾಸಿಯಂ, ಫೈಬರ್ ಹಾಗೂ ಆರೋಗ್ಯಕರ ಕೊಬ್ಬು ಹೊಂದಿರುತ್ತದೆ. ನ್ಯೂಟ್ರಿಯೆಂಟ್ಸ್ (2019) ಜರ್ನಲ್‌ನಲ್ಲಿ ನಡೆಸಿದ ಅಧ್ಯಯನವು ಆವಕಾಡೊ ಸೇವನೆಯು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿಷಯವು ತೋರಿಸಿದೆ.
ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜಗಳು ಮೆಗ್ನೀಸಿಯಂನ ಉತ್ತಮ ಮೂಲವಾಗಿದ್ದು, ಕುಂಬಳಕಾಯಿಯಲ್ಲಿ 150 ಮಿಗ್ರಾಂ ಮೆಗ್ನೀಸಿಯಂ ಇರುತ್ತದೆ. ಕುಂಬಳಕಾಯಿಯಲ್ಲಿರುವ ಸತು ಹಾಗೂ ಒಮೆಗಾ- 3 ಕೊಬ್ಬಿನಾಮ್ಲಗಳು ಉರಿಯೂತ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ಡಾರ್ಕ್ ಚಾಕೊಲೇಟ್: ಒಂದು ಔನ್ಸ್ ಡಾರ್ಕ್ ಚಾಕೊಲೇಟ್ 64 ಮಿಲಿಗ್ರಾಂ ಮೆಗ್ನೀಸಿಯಂ ಹೊಂದಿರುತ್ತದೆ. ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ (2020) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಡಾರ್ಕ್ ಚಾಕೊಲೇಟ್ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಕಡಿಮೆ ಮಾಡುತ್ತದೆ ಹಾಗೂ ಸಮತೋಲನಕ್ಕೆ ಉತ್ತಮವಾಗಿದೆ.
ಮೊಸರು: ಒಂದು ಕಪ್ ಮೊಸರಿನಲ್ಲಿ 42 ಮಿಲಿಗ್ರಾಂ ಮೆಗ್ನೀಸಿಯಂ ಇರುತ್ತದೆ. ಇದರದಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯ ಸುಧಾರಿಸುತ್ತದೆ ಹಾಗೂ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ.