ಮಾಯಾನಗರಿಗೆ ಹೊಸ ಸ್ಪರ್ಶ ನೀಡಲು ಮುಂದಾದ ‘ಮಹಾ’ ಸಿಎಂ ಶಿಂಧೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮುಂಬೈ ಮಹಾನಗದಲ್ಲಿ ರಸ್ತೆ ಗುಂಡಿ ಸಮಸ್ಯೆ, ಒಳಚರಂಡಿ ಸಮಸ್ಯೆ, ನದಿಯಂತಾಗುವ ರಸ್ತೆ ಸೇರಿದಂತೆ ಸಮಸ್ಯೆಗೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ರಸ್ತೆ ಗುಂಡಿ ಮುಚ್ಚಲು ನಿರ್ಧರಿಸಿದ್ದಾರೆ.
ನೀರಿನಿಂದ ನದಿಯಂತಾಗುವ ರಸ್ತೆಗಳ ಸ್ವರೂಪ ಬದಲಿಸುವುದಾಗಿ ಶಿಂಧೆ ಘೋಷಿಸಿದ್ದಾರೆ. ಇದಕ್ಕಾಗಿ ಜಿಯೋಪಾಲಿಮರ್ ತಂತ್ರಜ್ಞಾನ ಬಳಸುವುದಾಗಿ ಶಿಂಧೆ ಹೇಳಿದ್ದಾರೆ.
ಈ ಕುರಿತ್ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ, ಸ್ಥಳೀಯ ಶಾಸಕರ ಜೊತೆ ಶಿಂಧೆ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಗೊಳ್ಳಲಿದೆ . ಈ ಮೂಲಕ ಹೊಸ ಸರ್ಕಾರ ಮುಂಬೈಗೆ ಹೊಸ ಸ್ಪರ್ಶ ನೀಡಲು ಮುಂದಾಗಿದೆ.
ರಸ್ತೆ ಗುಂಡಿ ಜೊತೆಗೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗವು ಮಳೆ ನೀರಿನ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದೆ.
ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಮಾರ್ಗ ಕಂಡುಕೊಂಡಿದ್ದಾರೆ. ಇದೀಗ ಜಿಯೋಪಾಲಿಮರ್ ಮೂಲಕ ರಸ್ತೆ ಗುಂಡಿ ಮುಚ್ಚಿ ಸವಾರರಿಗೆ ಅನೂಕೂಲ ಮಾಡಿಕೊಡುವ ಭರವಸೆಯನ್ನು ಶಿಂಧೆ ನೀಡಿದ್ದಾರೆ.
ರಾಜಕೀಯ ತಿಕ್ಕಾಟ, ಬಣ ರಾಜಕೀಯ, ಶಿವಸೇನೆ ಪಕ್ಷದ ಕಾದಾಟ, ಕಾನೂನು ಹೋರಾಟದ ನಡುವೆ ಏಕನಾಥ್ ಶಿಂಧೆ ಮುಂಬೈಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಇತ್ತ ಶಿಂಧೆಗೆ ಭರ್ಜರಿ ಬೆಂಬಲವೂ ವ್ಯಕ್ತವಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!