ʻಮಹಾಭಾರತʼ ಧಾರಾವಾಹಿಯ ‘ಶಕುನಿ ಮಾಮಾ’ ಖ್ಯಾತಿಯ ಗುಫಿ ಪೈಂಟಲ್ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾಭಾರತ ಧಾರವಾಹಿಯಲ್ಲಿ ಶಕುನಿ ಮಾಮಾ ಎಂದೇ ಪ್ರಸಿದ್ಧರಾಗಿದ್ದ ನಟ ಗುಫಿ ಪೈಂಟಲ್ ಇಂದು ಕೊನೆಯುಸಿರೆಳೆದಿದ್ದಾರೆ.

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪೈಂಟಲ್ ಇಂದು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾದರು. ಈ ಬಗ್ಗೆ ಅವರ ಪುತ್ರ ಹ್ಯಾರಿ ಪೈಂಟಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಗುಫಿ ಪೈಂಟಲ್ ನಟರಾಗಿ ಮಾತ್ರವಲ್ಲದೆ, ದೂರದರ್ಶನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರು ರಫೂ ಚಕ್ಕರ್, ದೇಸ್ ಪರ್ದೇಸ್, ದಿಲ್ಲಗಿ, ಮೈದಾನ್-ಎ-ಜಂಗ್, ದಾವಾ ಮುಂತಾದ ಅನೇಕ ಜನಪ್ರಿಯ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

1988 ರಿಂದ 1990ರ ವರೆಗೆ ದೂರದರ್ಶನದಲ್ಲಿ ಮಹಾಭಾರತ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆಗ ಈ ಪೌರಾಣಿಕ ಕಥೆಯು ಭಾರೀ ಹಿಟ್‌ ಕೂಡ ಆಗಿತ್ತು. ಗುಫಿ ಪೈಂಟಲ್ ಅವರು ಈ ಧಾರಾವಾಹಿಯಲ್ಲಿ ಶಕುನಿ ಮಾಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!