ಮಹಾಕುಂಭ ಮೇಳ : ಜನರನ್ನು ದಾರಿತಪ್ಪಿಸುವ ಮಾಹಿತಿ, 8 ಮಂದಿ ವಿರುದ್ಧ ಎಫ್‌ಐಆರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಾರಿತಪ್ಪಿಸುವ ಫೋಸ್ಟ್ ಮಾಡಿದ್ದ ಆರೋಪದ ಮೇಲೆ ಎಂಟು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಹಾಕುಂಭ ಮೇಳ 2025 ‘ಸಾವಿನ ಹಬ್ಬ’ ಎಂದು ಮಾಡಲಾದ ಎಕ್ಸ್ ಪೋಸ್ಟ್ ವೊಂದರಲ್ಲಿ ಒಂದೇ ಕುಟುಂಬದ ಮೂವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರು ಶವಗಾರದಿಂದ ಮೃತದೇಹವನ್ನು ಪಡೆದು ಭುಜದ ಮೇಲೆ ಹೊತ್ಯೊಯ್ದರು ಎಂದು ಬರೆಯಲಾಗಿತ್ತು.

ಬಳಿಕ ಪರಿಶೀಲನೆ ನಂತರ ಈ ಫೋಸ್ಟ್ ನಲ್ಲಿ ಬಳಸಲಾದ ವಿಡಿಯೋ ನೇಪಾಳದ್ದು ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಏಳು ಎಕ್ಸ್ ಖಾತೆದಾರರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.‌

ಇನ್ನೊಂದು ಪ್ರಕರಣದಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದರಲ್ಲಿ ಮೃತದೇಹಗಳು ಮಹಾಕುಂಭ ಮೇಳದ ನದಿಯಲ್ಲಿ ತೇಲುತ್ತಿವೆ. ಮೃತದೇಹಗಳನ್ನು ನದಿಗೆ ಎಸೆಯುವ ಮೊದಲು ಇನ್ನೂ ಜೀವಂತವಿರುವ ಮೂತ್ರಪಿಂಡಗಳನ್ನು ತೆಗೆಯಲಾಗುತ್ತಿದೆ ಎಂದು ತಪ್ಪಾಗಿ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!