ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ 300 ರೂ. ಟಿ-ಶರ್ಟ್‌ಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ಸಹೋದರರು ಸೇರಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ವ್ಯಕ್ತಿ ಶುಭಮ್ ಹಾರ್ನೆ ಎಂದು ಗುರುತಿಸಲಾಗಿದೆ. ಅಕ್ಷಯ್ ಅಸೋಲ್ ಹಾಗೂ ಆತನ ಸಹೋದರ ಪ್ರಯಾಗ್ ಸೇರಿಕೊಂಡು ಹಾರ್ನೆಯನ್ನು ಹತ್ಯೆಗೈದಿದ್ದಾರೆ. ಅಕ್ಷಯ್ ಆನ್‌ಲೈನ್‌ನಲ್ಲಿ 300 ರೂ.ಗೆ ಟಿ-ಶರ್ಟ್ ಖರೀದಿಸಿದ್ದ. ಶರ್ಟ್‌ನ ಗಾತ್ರವು ಹೊಂದಿಕೆಯಾಗದ ಕಾರಣ ಅದನ್ನು ಶುಭಮ್ ಹಾರ್ನೆಗೆ ನೀಡಿದ್ದ. ಬಳಿಕ ಟಿ ಶರ್ಟ್‌ನ ಹಣವನ್ನು ಶುಭಮ್ ನೀಡಿರಲಿಲ್ಲ.
ಅಕ್ಷಯ್ ಹಣಕ್ಕಾಗಿ ಶುಭಮ್ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಹಣವನ್ನು ಅವನ ಮೇಲೆ ಎಸೆದಿದ್ದಾನೆ. ಇದು ಆರೋಪಿಗಳ ಕೋಪಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಅಕ್ಷಯ್ ಹಾಗೂ ಆತನ ಸಹೋದರ ಪ್ರಯಾಗ್ ಸೇರಿ ಶುಭಮ್‌ಗೆ ಕರೆ ಮಾಡಿ ಕಾವ್ರಪೇತ್ ಫ್ಲೈಓವರ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ಆತನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಹತ್ಯೆ ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾರ್ನೆ ಮತ್ತು ಅಕ್ಷಯ್ ಸಹೋದರರ ಮೇಲೆ ನಾಗ್ಪುರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.