ಹೊಸದಿಗಂತ ಡಿಜಿಟಲ್ ಡೆಸ್ಕ್;
ಸನ್ಯಾಸಿನಿ ಮಮತಾ ಕುಲಕರ್ಣಿ (Mamta Kulkarni) ಅವರು ಮತ್ತೆ ಕಿನ್ನರ ಅಖಾಡವನ್ನು ಸೇರಿಕೊಂಡಿದ್ದಾರೆ.
ನನ್ನ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಹೀಗಾಗಿ ನಾಗಾ ಸಾಧುಗಳ ಕಿನ್ನಾರ್ ಅಖಾಡ ‘ಮಹಾಮಂಡಲೇಶ್ವರ’ ಆಗಿ ಮುಂದುವರಿಯುತ್ತೇನೆ ಎಂದು ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ ಅವರು ಶುಕ್ರವಾರ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜನವರಿ 24 ರಂದು ಮಮತಾ ಕುಲಕರ್ಣಿ ಅವರನ್ನು ಮಹಾಮಂಡಲೇಶ್ವರ ಆಗಿ ನೇಮಕ ಮಾಡಲಾಗಿತ್ತು. ಇದಕ್ಕೆ ಹಲವು ಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮಹಾಮಂಡಲೇಶ್ವರ ಸ್ಥಾನಕ್ಕೆ ಅವರು ರಾಜೀನಾಮೆ ಘೋಷಿಸಿದ್ದಾರೆ.
ಆದರೆ ಗುರುವಾರ ವಿಡಿಯೋವೊಂದರಲ್ಲಿ ಬಾಲಿವುಡ್ ಮಾಜಿ ನಟಿ ‘ಮಹಾಮಂಡಲೇಶ್ವರ ಹುದ್ದೆಗೆ ನನ್ನ ರಾಜೀನಾಮೆ ಅಂಗೀಕರಿಸಿಲ್ಲ. ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ನನ್ನನ್ನು ಉಳಿಸಿಕೊಂಡಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಕಿನ್ನಾರ್ ಅಖಾಡದ ‘ಆಚಾರ್ಯ ಮಹಾಮಂಡಲೇಶ್ವರ’ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ಕುಲಕರ್ಣಿ ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಎಂದು ಖಚಿತಪಡಿಸಿದ್ದಾರೆ.