ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನಕ್ಕೆ ಇಳಿಯುವ ವೇಳೆ ಭಾರೀ ಕಾಲ್ತುಳಿತವಾಗಿತ್ತು. ಈ ಘಟನೆಯಲ್ಲಿ ಕರ್ನಾಟಕದ ಮತ್ತಿಬ್ಬರು ಯಾತ್ರಾರ್ಥಿಗಳು ಬಲಿಯಾಗಿರುವ ಮಾಹಿತಿ ಸಿಕ್ಕಿದೆ.
ಇದಕ್ಕೂ ಮುನ್ನ ಬೆಳಗಾವಿಯ ತಾಯಿ-ಮಗಳಾದ ಜ್ಯೋತಿ ಹಾಗೂ ಮೇಘಾ ಸಾವು ಕಂಡಿದ್ದು ವರದಿಯಾಗಿತ್ತು. ಈಗ ಬೆಳಗಾವಿಯ ಮತ್ತೊಬ್ಬರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶೆಟ್ಟಿಗಲ್ಲಿಯ ಅರುಣ್ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಎನ್ನುವ ಯಾತ್ರಾರ್ಥಿ ಸಾವು ಕಂಡಿದ್ದು ಖಚಿತವಾಗಿದೆ.
ಅರುಣ್ ತಮ್ಮ ಪತ್ನಿ ಜೊತೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಇಂದು ಬೆಳಗ್ಗೆ ಕಾಲ್ತುಳಿತದಲ್ಲಿ ಅರುಣ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಸಿಬ್ಬಂದಿಗಳು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅರುಣ್ ಕೊಪಾರ್ಡೆ ಸಾವು ಕಂಡಿದ್ದಾಗಿ ವರದಿಯಾಗಿದೆ.
ಇನ್ನು ಬೆಳಗಾವಿಯ ಶಿವಾಜಿನಗರದ ಮಹಾದೇವಿ ಕೂಡ ಸಾವು ಕಂಡಿದ್ದಾರೆ. ಅರಣು ಹಾಗೂ ಮಹಾದೇವಿ ಕುಟುಂಬಸ್ಥರಿಗೆ ಶಾಸಕ ಸಾಂತ್ವನ ಹೇಳಿದ್ದಾರೆ. ಶಾಸಕರು, ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಮಾಡಿದ್ದಾರೆ.
ಇದಕ್ಕೂ ಮುನ್ನ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಅವರ ಮಗಳು ಮೇಘಾ ಹತ್ತರವಾಠ್ ಮೃತಪಟ್ಟಿದ್ದನ್ನು ಅವರ ಸಹೋದರ ಗುರುರಾಜ್ ಹುದ್ಧಾರ ಖಚಿತಪಡಿಸಿದ್ದರು.