ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬಡಾವಣೆ ಒಂದರ ಮನೆಯಲ್ಲಿ ಸ್ನಾನಕ್ಕೆ ಎಂದು ತೆರಳಿದ್ದ ಯುವತಿಯನ್ನು ಹೊತ್ತೊಯ್ದು ಅಸ್ಸಾಂ ಮೂಲದ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಅಸ್ಸಾಂ ಮೂಲದ ಮಂಜೂರ್ ಆಲಂ ಎಂಬಾತನಿಂದ ಈ ಒಂದು ಭೀಕರ ಕೃತ್ಯ ನಡೆದಿದೆ. ರಕ್ತಸಿಕ್ತವಾಗಿ ಹೊರಬಂದ 20 ವರ್ಷದ ಯುವತಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿ ಪಕ್ಕದ ಮನೆಯಲ್ಲಿದ್ದ ಈ ಅಸ್ಸಾಂ ಮೂಲದ ಮಂಜೂರ್ ಆಲಂ ಎನ್ನುವ ಯುವಕ ಸ್ನಾನ ಮಾಡಲು ಯುವತಿ ಬಾತ್ರೂಮಿಗೆ ತೆರಳಿದ್ದಾಳೆ. ಈ ವೇಳೆ ಯುವತಿಯನ್ನು ತನ್ನ ರೂಮ್ಗೆ ಹೊತ್ತೊಯ್ದಿದ್ದಾನೆ. ಯುವತಿಯ ಚಿರಾಟ ಕೇಳಿ ಜನರು ಸ್ಥಳಕ್ಕೆ ಬಂದಿದ್ದಾರೆ. ಘಟನೆ ಬಳಿಕ ಪರಾರಿಯಾಗುತ್ತಿದ್ದ ಆರೋಪಿಯನ್ನುಕೂಡಲೇ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.