ಪುಟ್ಟತಂಗಿ ಕಣ್ಣೆದುರೇ 5 ವರ್ಷದ ಬಾಲಕನನ್ನ ಎಳೆದೊಯ್ದು ಕೊಂದುಹಾಕಿದ ಬೀದಿನಾಯಿಗಳು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪುಟ್ಟ ತಂಗಿಯ ಕಣ್ಣೆದುರೇ 5 ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಎಳೆದೊಯ್ದು ಕಚ್ಚಿಕೊಂದು ಹಾಕಿದ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಟೋಲ್ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.
ವಿರಾಜ್ ರಾಜು ಜಯವರ್ ಎಂಬ ಬಾಲಕ ತನ್ನ ಸಹೋದರಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ವೇಳೆ ಧಂತೋಳಿ ಎಂಬ ಸ್ಥಳದಲ್ಲಿ ನಾಯಿಗಳು ದಾಳಿ ನಡೆಸಿವೆ. ಅಣ್ಣನ ಮೇಲೆ ಣಾಯಿಗಳ ದಾಳಿಯಿಂದ ಬೆದರಿದ ತಂಗಿ ಅವುಗಳನ್ನು ಓಡಿಸಲು ಪ್ರಯತ್ನಿಸಿದ್ದಾಳೆ. ತಂಗಿ ಭಯಭೀತರಾಗಿ ನೋಡುತ್ತಿದ್ದಂತೆಯೇ ಬಾಲಕನನ್ನು ನಿರ್ಮಾಣ ಹಂತದಲ್ಲಿದ್ದ ಖಾಲಿ ಕಟ್ಟಡವೊಂದಕ್ಕೆ ಎಳೆದೊಯ್ದ ಶ್ವಾನಗಳು ಅಲ್ಲಿ ಅವನನ್ನು ಭೀಕರವಾಗಿ ಕೊಚ್ಚಿ ಕೊಂದುಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟೋಲ್ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!