ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: ಪ್ರಮಾಣ ವಚನ ಸ್ವೀಕರಿಸಿದ 18 ಸಚಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದ್ದು, 18 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ನಾಟಕೀಯ ಬೆಳವಣಿಗೆಗಳ ನಡುವೆ ಏಕನಾಥ್ ಶಿಂಧೆ ಬಣ ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರ ರಚಿಸಿ, ಶಿಂಧೆ ಮಹಾ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಅದಾದ ಬಳಿಕ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಒಟ್ಟು 18 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಶಿಂಧೆ ವರ್ಗದ ಒಂಬತ್ತು ಜನರು, ಬಿಜೆಪಿಯಿಂದ ಒಂಬತ್ತು ಮಂದಿ ಸಮನಾಗಿ ಸಚಿವರಾಗಿದ್ದಾರೆ. ಇಂದು ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ 18 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಶಿಂಧೆ ಹಾಗೂ ಬಿಜೆಪಿ ನಾಯಕತ್ವದ ನಡುವೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದವು. ಸುದೀರ್ಘ ಚರ್ಚೆ ಬಳಿಕ ಶಿಂಧೆ ಬಣದ ಶಾಸಕರು ಹಾಗೂ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಯಾವುದೇ ಟೀಕೆಗಳಿಲ್ಲದೆ ಸಮತೋಲಿತವಾಗಿ ಸ್ಥಾನ ಕಲ್ಪಿಸಲಾಗಿದೆ.

ಬಿಜೆಪಿಯಲ್ಲಿ ಸಚಿವರಾದವರು

ಬಿಜೆಪಿಯಿಂದ ಚಂದ್ರಕಾಂತ್‌ ಪಾಟೀಲ್‌, ಸುಧೀರ್‌ ಮುಗಂಟಿವಾರ್‌, ಗಿರೀಶ್‌ ಮಹಾಜನ್‌, ಸುರೇಶ್‌ ಖಂಡೆ, ರಾಧಕೃಷ್ಣ ವಿಕಿ ಪಾಟೀಲ್‌, ರವೀಂದ್ರ ಚೌಹ್ಹಾನ್‌, ಮಂಗಲ್‌ ಪ್ರಭಾತ್‌ ಲೋಧಾ, ವಿಜಯ ಕುಮಾರ್‌ ಗಾವಿತ್‌ ಮತ್ತು ಅತುಲ್‌ ಸಾವೆ ಪ್ರಮಾಣ ವಚನ ಸ್ವೀಕರಿಸಿದರು.

ಶಿಂಧೆ ಬಣದ ಸಚಿವರು

ಶಿವಸೇನೆಯಿಂದ ದಾದಾ ಭೂಸೆ, ಶಂಬುರಾಜೆ ದೇಸಾಯಿ, ಸಂದೀಪನ್‌ ಭೂಮ್ರೆ, ಉದಯ್‌ ಸಾಮಂತ್‌, ತಾನಾಜಿ ಸಾವಂತ್‌, ಅಬ್ದುಲ್‌ ಸತ್ತಾರ್‌, ದೀಪಕ್‌ ಕೇಸರ್ಕರ್‌, ಗುಲಬ್‌ರಾವ್‌ ಪಾಟೀಲ್‌, ಸಂಜಯ್‌ ರಾಥೋಡ್‌ಗೆ ಸಚಿನ ಸ್ಥಾನ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!