ಮಹಾರಾಷ್ಟ್ರ ಚುನಾವಣೆ | ಮತಗಟ್ಟೆಯ ಬಳಿ ಕುಸಿದು ಬಿದ್ದು ಅಭ್ಯರ್ಥಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಚುನಾವಣೆಯ ಮತದಾನ ಮುಖ್ಯವಾಗಿದ್ದು, ಶಾಂತವಾಗಿ ಜನರು ಬಂದು ಮತ ಚಲಾಯಿಸಿದರು. ಇದರ ನಡುವೆ ಬೀದ್​ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಬಾಳಾಸಾಹೇಬ್ ಶಿಂಧೆ ಎಂಬುವವರು ಮತಗಟ್ಟೆಯ ಬಳಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಬೀಡಿ ಸಿಟಿಯ ಛತ್ರಪತಿ ಸಾಹು ವಿದ್ಯಾಲಯದಲ್ಲಿ ಮತದಾನ ನಡೆಯುತ್ತಿತ್ತು. ಸ್ಥಳಕ್ಕೆ ಬಾಳಾ ಸಾಹೇಬ್ ಶಿಂಧೆ ಆಗಮಿಸಿದಾಗ ಅವರನ್ನು ಒಳಗೆ ಹೋಗದಂತೆ ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಬಾಳಾ ಸಾಹೇಬ್​ ಶಿಂಧೆ ಕುಸಿದು ಬಿದ್ದಿದ್ದಾರೆ.

ಕುಸಿದು ಬಿದ್ದ ಬಾಳಾಸಾಹೇಬ್ ಶಿಂಧೆರನ್ನು ಸಮೀಪದ ಛತ್ರಪತಿ ಸಂಭಾಜಿ ನಗರದ ನಾನಾ ಆಸ್ಪತ್ರೆಗೆ ಸೇರಿಸಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಬಾಳಾಸಾಹೇಬ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಿಸಿಕೊಳ್ಳದೇನೇ ವೈದ್ಯರು ಶಿಂಧೆ ಮಾರ್ಗಮಧ್ಯೆಯೇ ತೀರಿ ಹೋಗಿದ್ದಾರೆ ಎಂದು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!