ಮಹಾರಾಷ್ಟ್ರ ಚುನಾವಣೆ : ಮೊದಲ ಬಾರಿಗೆ ಕನ್ನಡದಲ್ಲಿ ಅಭ್ಯರ್ಥಿಗಳ ಹೆಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಾವಿಯ ಕರ್ನಾಟಕ-ಮಹಾರಾಷ್ಟ್ರ ಗಡಿ ಗ್ರಾಮಗಳ ಉದ್ದಕ್ಕೂ ಮರಾಠಿ ಭಾಷಿಗರನ್ನು ಓಲೈಸಲು ಮಹಾರಾಷ್ಟ್ರದ ರಾಜಕೀಯ ನಾಯಕರು ಚುನಾವಣೆಯ ಸಮಯದಲ್ಲಿ ಭಾಷೆ ಮತ್ತು ಗಡಿ ವಿಷಯಗಳನ್ನು ಮತ್ತೆ ಮತ್ತೆ ತರುತ್ತಾರೆ.

ಆದರೆ ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಲಕ್ಷಾಂತರ ಮಂದಿ ಕನ್ನಡ ಮಾತನಾಡುವವರಿದ್ದಾರೆ, ಅವರ ಧ್ವನಿಯನ್ನು ದಶಕಗಳಿಂದ ಹತ್ತಿಕ್ಕಲಾಗಿದೆ.

ಇದೀಗ ಮೊದಲ ಬಾರಿಗೆ ಮಹಾರಾಷ್ಟ್ರದ ಚುನಾವಣಾ ಆಯೋಗವು ನೆರೆಯ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಯಂತ್ರಗಳಲ್ಲಿ ಕನ್ನಡ ಹಾಗೂ ಮರಾಠಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಮುದ್ರಿಸಿದೆ. ಲಾತೂರ್, ಮಂಗಳವೇಡ್, ಅಕ್ಕಲಕೋಟ, ಜತ್ತ್ ಮತ್ತು ದಕ್ಷಿಣ ಸೊಲ್ಲಾಪುರ ಸೇರಿದಂತೆ ಈ 15 ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡ ಮಾತನಾಡುವ ಜನ ಹೆಚ್ಚು. ಮಹಾರಾಷ್ಟ್ರದ ಈ ಕ್ಷೇತ್ರಗಳಲ್ಲಿ ಕನಿಷ್ಠ 50 ರಿಂದ 60 ಲಕ್ಷ ಕನ್ನಡ ಮಾತನಾಡುವವರಿದ್ದು, ಹೆಚ್ಚಿನವರು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!