ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಕತ್ತೆಗೆ ಕಟ್ಟಿ ಮೆರವಣಿಗೆ ಮಾಡಿದ ಗ್ರಾಹಕ: ಕಾರಣವೇನು ಗೊತ್ತಾ!?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಕೆಲವೇ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಕೆಟ್ಟುಹೋಯ್ತು. ಆದರೆ ಇದಕ್ಕೆ ಕಂಪನಿಯಿಂದ ಯಾವುದೇ ಸೂಕ್ತ ಪ್ರತಿಕ್ರಿಯೆಗಳು ಬಾರದಿದ್ದರಿಂದ ಬೇಸತ್ತ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಬೀಡ್‌ ಜಿಲ್ಲೆಯ ಸಚಿನ್ ಗಿಟ್ಟೆ ಎಂಬುವವರು ಎಂಬುವರು ತಮ್ಮ ಓಲಾ ಸ್ಕೂಟರ್‌ ಗೆ ಕತ್ತೆಯನ್ನು ಕಟ್ಟಿ ಎಳಿದು ʼಓಲಾ ಕಂಪನಿಯನ್ನು ನಂಬಬೇಡಿʼ ಎಂದು ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಯಾದ ಲೆಟ್ಸ್‌ಅಪ್ ಮರಾಠಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಕ್ಲಿಪ್ ನಲ್ಲಿ ಅವರು ಕತ್ತೆಯೊಂದಿಗೆ ದ್ವಿಚಕ್ರ ವಾಹನವನ್ನು ಎಳೆಯುತ್ತಿರುವ ದೃಶ್ಯಗಳಿವೆ.
ಸಚಿನ್ ಗಿಟ್ಟೆ ಸ್ಕೂಟರ್‌ ಖರೀದಿ ಮಾಡಿದ ಕೇವಲ ಆರು ದಿನಗಳಲ್ಲಿ ಕೆಟ್ಟುಹೋಗಿದೆ. ಈ ಕುರಿತು ಕಂಪನಿಯನ್ನು ಸಂಪರ್ಕಿಸಿದರೆ ಉತ್ತರಿಸಲೂ ಇಲ್ಲ, ಸರಿಪಡಿಸಿಕೊಡಲೂ ಇಲ್ಲ. ಕಂಪನಿಯ ಕಸ್ಟಮರ್‌ ಕೇರ್‌ ಗೆ ಅನೇಕ ಬಾರಿ ಕರೆ ಮಾಡಿದರೂ ಬೇಕಾಬಿಟ್ಟಿ ಉತ್ತರಗಳನ್ನು ನೀಡಿದರು ಎಂದು ಸಚಿನ್ ಗಿಟ್ಟೆ ಆರೋಪಿಸಿದ್ದಾರೆ. ಸ್ಕೂಟರ್‌ ಕತ್ತೆಗೆ ಕಟ್ಟಿ ಎಳಿಯುತ್ತಿರುವ ವಿಡಿಯೋಗಳು ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿದೆ. ಸರಣಿ ಬ್ಯಾಟರೀ ಸ್ಫೋಟ ಪ್ರಕರಣಗಳಿಂದಾಗಿ ಓಲಾ ಸ್ಕೂಟರ್‌ ಗಳು ಇತ್ತೀಚೆಗೆ ಸುದ್ದಿಯಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!