ಶಾಂತ ರೀತಿಯಿಂದ ಚಳವಳಿ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಮಹಾಸೇನಾನಿ ಗಾಂಧೀಜಿ: ಸಚಿವ ಬಿ. ನಾಗೇಂದ್ರ

ಹೊಸದಿಗಂತ ವರದಿ ಬಳ್ಳಾರಿ:

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಸೇನಾನಿ, ಮಹಾತ್ಮಾ ಗಾಂಧೀಜಿ ಅವರನ್ನು ಎಷ್ಟು ಸ್ಮರಿಸಿದರೂ ಸಾಲದು, ಅವರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಪರಿಶಿಷ್ಟ ಪಂಗಡ, ಕ್ರೀಡೆ, ಯುವಜನ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ಮಹಾತ್ಮಾ ಗಾಂಧೀಜಿ ಅವರ 154ನೇ ಜಯಂತ್ತ್ಯುತ್ಸವ ಹಾಗೂ ಗಾಂಧೀಜಿ ಅವರ ತತ್ವ ಸಂದೇಶ ಕುರಿತು ಉಪನ್ಯಾಸ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ, ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಂತಿ ರೀತಿಯಿಂದ ಚಳುವಳಿ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾಸೇನಾನಿ ಮಹಾತ್ಮಾ ಗಾಂಧೀಜಿ ಅವರು, ಬಳ್ಳಾರಿ ಭೇಟಿ ನೀಡಿದ್ದರು, ಅವರ ಹತ್ಯೆಯಾದ ಬಳಿಕ ಅವರ ಚಿತಾಭಸ್ಮವನ್ನು ರಾಜಘಾಟ್ ನಿಂದ ಮೆರವಣಿಗೆಯಲ್ಲಿ ತಂದು ವಿಜಯನಗರ-ಬಳ್ಳಾರಿ ಉಭಯ ಜಿಲ್ಲೆಯ ಕೂಡ್ಲಗಿಯಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ, ಇದು ಇಡೀ ರಾಜ್ಯದಲ್ಲೇ ಎಲ್ಲೂ ಇಲ್ಲ ಎಂದರು

ಬಳ್ಳಾರಿ ಜಿಲ್ಲೆಗೆ ಅವರ ನಂಟು ಸಾಕಷ್ಟಿದೆ. ಕಳೆದ 1921ರಲ್ಲಿ ಮೊದಲ ಬಾರಿಗೆ ಮಹಾತ್ಮಾ ಗಾಂಧೀಜಿಯವರು ಬಳ್ಳಾರಿಗೆ ಭೇಟಿ ನೀಡಿದ್ದರು, ನಂತರ 1934ರಲ್ಲಿ ದೇಣಿಗೆ ಸಂಗ್ರಹಿಸಲು ಆಗಮಿಸಿದ್ದರು, ನಂತರ 1964ರಲ್ಲಿ ಆಗಮಿಸಿದ್ದರು, ಈ ವೇಳೆ ಆಂದ್ರ ಹಾಗೂ ರಾಜ್ಯದವರು ನಮ್ಮಲ್ಲಿ ಬನ್ನಿ ಎಂದು ಆಹ್ವಾನಿಸಿದಾಗ, ಎರಡೂ ಕಡೆ ಬೇಡ ಎಂದು ಸಮಾಧಾನ ಪಡಿಸಿ ನಗರದ ರೈಲ್ವೆ ನಿಲ್ದಾಣದಲ್ಲಿ ಒಂದು ರಾತ್ರಿ ತಂದಿದ್ದರು, ನಂತರ ಮತ್ತೆ ಆಗಮಿಸಿದಾಗ ನಗರದ ಶರಾಪ್ ಎನ್ನುವವರ ಮನೆಯಲ್ಲಿ ವಾಸವಾಗಿ, ದೇಣಿಗೆ ಸಂಗ್ರಹಿಸಿದ್ದರು ಎಂದು ಸ್ಮರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!