September 29, 2026
Tuesday, September 29, 2026
spot_img

ಮಹಾಶಿವರಾತ್ರಿ ಎಫೆಕ್ಟ್‌: ಹೂವು, ಹಣ್ಣಿನ ರೇಟ್‌ ಕೇಳಿ ಗ್ರಾಹಕರು ಶಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾಶಿವರಾತ್ರಿ ಹಬ್ಬಕ್ಕೆ ಇನ್ನೇನು ಒಂದೇ ದಿನ ಬಾಕಿ ಇದ್ದು, ಈಗಾಗಲೇ ಜನ ಮಾರುಕಟ್ಟೆಯಲ್ಲಿ ಹಣ್ಣು, ಹೂವಿನ ಖರೀದಿಯಲ್ಲಿ ತೊಡಗಿದ್ದಾರೆ.

ಮಾರುಕಟ್ಟೆಗೆ ಹೋದ ಜನರಿಗೆ ಹೂವು, ಹಣ್ಣುಗಳ ರೇಟ್‌ ಕೇಳಿ ಶಾಕ್‌ ಆಗಿದೆ. ಈ ವರ್ಷ ಹೂಗಳ ಬೆಲೆ ಹೆಚ್ಚಾಗಿದೆ, ಹಬ್ಬದ ಸಮಯದಲ್ಲಿ ಇದು ಶೇ.60ರಷ್ಟು ಹೆಚ್ಚಾಗಿದೆ.

ಹಣ್ಣುಗಳ ಬೆಲೆಯಲ್ಲಿ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಬೆಲೆ ಏರಿಕೆಗೆ ಹಬ್ಬದ ಬೇಡಿಕೆ ಮತ್ತು ಚಳಿಗಾಲದಲ್ಲಿ ಹೂವಿನ ಉತ್ಪಾದನೆ ಕಡಿಮೆಯಾಗಿರುವುದು ಮುಖ್ಯ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ ಮತ್ತು ಸುಗಂಧರಾಜ ಸೇರಿದಂತೆ ಎಲ್ಲ ವಿಧದ ಹೂವುಗಳ ಬೆಲೆ ದುಬಾರಿಯಾಗಿದೆ.

ಸೇಬು, ದಾಳಿಂಬೆ, ಬಾಳೆಹಣ್ಣಿನ ದರವೂ ಹೆಚ್ಚಾಗಿದ್ದು, ಗ್ರಾಹಕರ ಜೇಬು ಬಿಸಿಯಾಗಿದೆ. ಹಬ್ಬದ ಸೀಸನ್‌ನಲ್ಲಿ ದರ ಹೆಚ್ಚಾಗೋದು ಮಾಮೂಲಿ ಎಂದು ಕೆಲವರು ಖರೀದಿಯಲ್ಲಿ ಮುಳುಗಿದ್ದಾರೆ. ನಾಳೆ ಈ ಸಾಮಾಗ್ರಿಗಳ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Must Read