ಮಹಾತ್ಮ ಗಾಂಧಿ ನರೇಗಾ ಹಬ್ಬ-2025: ಚಿತ್ರದುರ್ಗ ಜಿಲ್ಲೆಗೆ 3 ಪ್ರಶಸ್ತಿಗಳ ಗರಿ

ಹೊಸ ದಿಗಂತ ವರದಿ,ಚಿತ್ರದುರ್ಗ :
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹಾತ್ಮ  ಗಾಂಧಿ ನರೇಗಾ ಯೋಜನೆ ಬೆಂಗಳೂರು ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ದಿನಾಂಕ. ೦೫.೦೨.೨೦೧೫ ರ  ಬುಧವಾರ ದಂದು ನರೇಗಾ ಹಬ್ಬ-೨೦೨೫ ದಲ್ಲಿ ಅತ್ಯುತ್ತಮವಾಗಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಿದ ಜಿಲ್ಲೆಯ “ಸಾಮಾಜಿಕ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ” ನೀಡಲಾಗಿದೆ.

ಚಳ್ಳಕೆರೆ ತಾಲೂಕು, ಬೆಳಗೆರೆ ಗ್ರಾಮ ಪಂಚಾಯಿತಿಗೆ “ಅತ್ಯುತ್ತಮ ಗ್ರಾಮ ಪಂಚಾಯಿತಿ” ಮತ್ತು ಚಿತ್ರದುರ್ಗ ತಾಲೂಕಿನ ದ್ಯಾಮವನಹಳ್ಳಿ ಗ್ರಾಮ ಪಂಚಾಯಿತಿಯ ರೇಷ್ಮೆ ಬೆಳೆಗಾರರಾದ ಶ್ರೀಮತಿ ಧನಲಕ್ಷ್ಮಿ ರವರಿಗೆ “ವಿಶೇಷ ಪ್ರಸಂಶನಾ ಪತ್ರ ವಿತರಣೆ ಪ್ರಶಸ್ತಿ”ಯನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಎಸ್. ಹೊರಟ್ಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಇವರುಗಳು “ನರೇಗಾ ಹಬ್ಬ -೨೦೨೫ ಪ್ರಶಸ್ತಿ”ಗಳನ್ನು ಕೊಡಮಾಡಿದರು.

ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್, ಸಾಮಾಜಿಕ ಅರಣ್ಯ ಇಲಾಖೆಯ ಹರೀಶ್.ಕೆ ಮತ್ತು ಇಲಾಖೆಯ ಅಧಿಕಾರಿಗಳು, ಬೆಳಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಿಶಾಲಾಕ್ಷಿ, ಪಿಡಿಒ ದೇವೇಂದ್ರಪ್ಪ. ಸಿ.ಎಂ. ಮತ್ತು ದ್ಯಾಮವ್ವನಳ್ಳಿ ಗ್ರಾಮ ಪಂಚಾಯತಿಯ ಧನಲಕ್ಷ್ಮಿ ಹಾಗೂ ಜಿ.ಪಂ. ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿ.ಪಂ. ನರೇಗಾ ಶಾಖೆಯ ಎಡಿಪಿಸಿ ಮೋಹನ್ ಕುಮಾರ್ ಟಿ.ಎನ್., ಜಿಲ್ಲಾ ಐಇಸಿ ಸಂಯೋಜಕರಾದ ರವೀಂದ್ರನಾಥ್ ಎಂ.ಎಸ್., ಜಿಲ್ಲಾ ಎಂಐಎಸ್ ಸಂಯೋಜಕರಾದ ಡಿ.ಎಂ.ಸಹನಾ ಹಾಗೂ ಅಕೌಂಟ್ ಮೆನೇಜರ್ ಸಿದ್ದಲಿಂಗ ತೇಜಸ್ವಿಯವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!