ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಹುಲ್ ಗಾಂಧಿಯನ್ನು ಹೊಗಳುವ ಭರದಲ್ಲಿ ಮಹಾತ್ಮಾ ಗಾಂಧಿಗೆ ಕಾಂಗ್ರೆಸ್ ಮಾಜಿ ಶಾಸಕ ಅವಮಾನಿಸಿದ ಘಟನೆ ನಡೆದಿದೆ.
ಮಹಾತ್ಮಾ ಗಾಂಧಿಯಲ್ಲಿ ಒಂದಷ್ಟು ಕುತಂತ್ರವಿತ್ತು. ಆದರೆ ರಾಹುಲ್ ಗಾಂಧಿ ಸಂಪೂರ್ಣ ಪ್ರಮಾಣಿಕ ಹಾಗೂ ಸತ್ಯದ ಮಾರ್ಗದಲ್ಲಿ ನಡೆಯುವ ನಾಯಕ ಎಂದು ಗುಜರಾತ್ ಕಾಂಗ್ರೆಸ್ ಮಾಜಿ ಶಾಸಕ ಇಂದ್ರಾನಿಲ್ ರಾಜಗುರು ಹೇಳಿದ್ದಾರೆ. ಇದೀಗ ಈ ಮಾತು ವಿವಾದಕ್ಕೀಡಾಗಿದೆ .
ಲೋಕಸಭಾ ಚುನಾವಣಾ ಪ್ರಯುಕ್ತ ಗುಜರಾತ್ ಪರೇಶ್ ದನಾನಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಇಂದ್ರಾನಿಲ್ ರಾಜಗುರ್ ,ರಾಹುಲ್ ಗಾಂಧಿ ಕುರಿತು ಮಾತನಾಡುತ್ತಾ , ನನ್ನ ಮಾತುಗಳನ್ನು ದಾಖಲಿಸಿಕೊಳ್ಳಿ, ಈ ರಾಷ್ಟ್ರದಲ್ಲಿ ಗಾಂಧಿಯಂತಿರುವ ಮತ್ತೊಬ್ಬ ವ್ಯಕ್ತಿ ಹುಟ್ಟಿದ್ದರೆ ಅದು ರಾಹುಲ್ ಗಾಂಧಿ ಮಾತ್ರ. ರಾಹುಲ್ ಗಾಂಧಿ ನೀತಿ., ನಿಯತ್ತಿನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆದರೆ ಮತ್ತೊಬ್ಬರು ಗಾಂಧಿ ಇದ್ದರು ಅವರು ಹೇಡಿಯಾಗಿದ್ದರು, ಆ ಗಾಂಧಿಯಲ್ಲಿ ಒಂದಷ್ಟು ಕುತಂತ್ರವಿತ್ತು. ಆದರೆ ರಾಹುಲ್ ಗಾಂಧಿ ಸತ್ಯ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದು ರಾಜಗುರು ಹೇಳಿದ್ದಾರೆ.ಈ ಹೇಳಿಕೆ ಕಾಂಗ್ರೆಸ್ ಗೆ ದೊಡ್ಡ ತಲೆನೋವು ತಂದಿಟ್ಟಿದೆ.
ಕಾಂಗ್ರೆಸ್ ನಾಯಕನ ಹೇಳಿಕೆ ಇದೀಗ ಭಾರಿ ವೈರಲ್ ಆಗಿದೆ. ರಾಹುಲ್ ಗಾಂಧಿಯನ್ನು ಹೊಗಳುವ ಭರದಲ್ಲಿ ಮಹಾತ್ಮಾ ಗಾಂಧಿಗೆ ಅವಮಾನಿಸಿದ್ದಾರೆ ಅನ್ನೋ ಆಕ್ರೋಶಗಳು ವ್ಯಕ್ತವಾಗುತ್ತಿದೆ.