ಹೊಸದಿಗಂತ ವರದಿ, ಬನವಾಸಿ(ಮಯೂರವರ್ಮ ವೇದಿಕೆ):
ಬಸವಾದಿ ಶರಣರು, ಅಂಬೇಡ್ಕರ್, ಗಾಂಧಿಜೀ ಇವರೆಲ್ಲ ನುಡಿದಂತೆ ನಡೆದವರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅನುಷ್ಠಾನಕ್ಕೆ ಇಂತಹ ಮಹಾತ್ಮರೇ ಪ್ರೇರಣೆಯಾಗಿದ್ದು ನಾವು ಜನರಿಗೆ ಮಾತು ಕೊಟ್ಟಂತೆ ನಡೆದಿದ್ದೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬನವಾಸಿಯಲ್ಲಿ ಎರಡು ನಡೆಯುವ ರಾಜ್ಯ ಸರ್ಕಾರದ ಪ್ರತಿಷ್ಠಿತ ಕದಂಬೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಬುದ್ದ ಬಸವ ಗಾಂಧಿ ಅಂಬೇಡ್ಕರ್ ಕನಕದಾಸರು ಹೇಳಿದ್ದನ್ನು ಪ್ರತಿಯೊಬ್ಬ ಭಾರತಿಯರೂ ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಮನುಷ್ಯನ ನಡುವೆ ದ್ವೇಷದ ಬದಲು ಪ್ರೀತಿ ಇರಬೇಕು. ಅದೇ ನಿಜವಾದ ಮನುಷ್ಯತ್ವ. ಅದಕ್ಕೆ ಆದಿ ಕವಿ ಪಂಪ ಮನುಷ್ಯ ಜಾತಿ ತಾನೊಂದೇ ಒಲವು ಎಂದಿದ್ದಾನೆ. ನಾವೆಲ್ಲರೂ ಮನುಷ್ಯರು. ಕೆಲವು ಸ್ವಾರ್ಥಿಗಳು ಜಾತಿ, ಧರ್ಮ ಎಂದು ವಿಂಗಡಣೆ ಮಾಡಿ ಮನುಷ್ಯರ ನಡುವೆ ವಿಭಜನೆ ಮಾಡುತ್ತಿದ್ದೇವೆ.ಯಾವುದೇ ಜಾತಿ ಧರ್ಮದ ವಿಂಗಡಣೆ ಮಾಡದೇ ನಾವೆಲ್ಲ ಮನುಷ್ಯರು ಎನ್ನುವುದನ್ನು ಮೊದಲು ತಿಳಿಯಬೇಕು ಎಂದರು.
ಸಚಿವ ಮಂಕಾಳ ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಸತೀಶ ಸೈಲ್, ಜಿಲ್ಲಾಕಾರಿ ಗಂಗೂಬಾಯಿ ಮಾನಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇತರರಿದ್ದರು.