ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಸೇವೆಗೆ ನಾಳೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟನೆಗೆ ಸಜ್ಜಾಗಿದೆ. ಪಶ್ಚಿಮ ಬಂಗಾಳದ ಅತೀ ದೊಡ್ಡ ನದಿ ಹೂಗ್ಲಿ ನದಿಯ ಅಡಿಯಿಂದ ಸಾಗುವ ಈ ಮೆಟ್ರೋಲ್ ರೈಲನ್ನು ಮಾರ್ಚ್ 6 ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಈ ರೈಲು ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳನ್ನು ಹೊಂದಿದೆ. ಒಟ್ಟು 16.6 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಪೈಕಿ 4. 8 ಕಿಲೋಮೀಟರ್ ಹೂಗ್ಲಿ ನದಿಯ ಆಳದಿಂದ ಸಾಗಲಿದೆ.

ಈ ಮೆಟ್ರೋ ರೈಲು 45 ಸೆಕೆಂಡ್‌ ಹೂಗ್ಲಿ ನದಿ ನೀರಿನ ಅಡಿಯಲ್ಲಿನ ಸುರಂಗದಲ್ಲಿ ಸಾಗಲಿದೆ. ಇದು ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂಡರ್‌ ವಾಟರ್‌ ಟ್ರೈನ್‌ ಯೋಜನೆ ಅತ್ಯು​ತ್ತಮ ಇಂಜಿ​ನಿ​ಯ​ರಿಂಗ್‌ಗೆ ನಿದ​ರ್ಶ​ನ​ವಾ​ಗಿದ್ದು, ಈ ರೈಲು ದೇಶದ ರೈಲ್ವೆ​ಯಲ್ಲಿನ ಅಭಿ​ವೃ​ದ್ಧಿಯ ಸಂಕೇ​ತ​ವಾ​ಗಿದೆ. ಈ ಯೋಜ​ನೆ​ಯಿಂದ ಕೋಲ್ಕತಾ ಮಂದಿ ಆರಾ​ಮ​ವಾ​ಗಿ ಪ್ರಯಾ​ಣಿ​ಸ​ಹುದು. ಇದ​ರಿಂದ ದೇಶವೇ ಹೆಮ್ಮೆ ಪಡ​ಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ರೈಲು ಕೋಲ್ಕತಾ ಮೆಟ್ರೋ ಲೈನ್‌-2ರ ಭಾಗ​ವಾ​ಗಿ​ರ​ಲಿದೆ. ಈ​ಸ್ಟ್‌ -ವೆಸ್ಟ್‌ ಮೆಟ್ರೋ ಎಂದು ಕರೆ​ಸಿ​ಕೊ​ಳ್ಳುವ ಈ ರೈಲು ಮೊದ​ಲನೆ ಹಂತದ ಯೋಜನೆಯಲ್ಲಿ ಸಾಲ್ಟ್‌ ಲೇಕ್‌ ಸೆಕ್ಟ​ರ್‌ ನಿಂದ ಸಾಲ್ಟ್‌ ಲೇಕ್‌ ಸ್ಟೇಡಿಯಂ ವರೆಗೆ , ಎರ​ಡನೇ ಹಂತ ಸಾಲ್ಟ್‌ ಲೇಕ್‌ ಸೆಕ್ಟ​ರ್‌ ನಿಂದ ಹೌರಾ ಮೈದಾ​ನದ ವರೆಗೆ ಇರ​ಲಿದೆ. ಈ ರೈಲು ಗಂಟೆಗೆ 80 ಕಿ.ಮಿ ವೇಗ​ದಲ್ಲಿ ಚಲಿ​ಸುವ ಸಾಮರ್ಥ್ಯ ಹೊಂದಿ​ದೆ. ನೀರಿ​ನೊ​ಳಗೆ ನಿರ್ಮಿ​ಸ​ಲಾ​ಗು​ತ್ತಿ​ರುವ ಸುರಂಗ 520 ಮೀಟರ್‌ ಉದ್ದ ಹಾಗೂ 30 ಮೀಟರ್‌ ಆಳ ಇರ​ಲಿದೆ. 2017ರ ಎಪ್ರಿಲ್‌ ಅಂತ್ಯಕ್ಕೆ ಆರಂಭ​ವಾಗಿರುವ ಈ ರೈಲು ಯೋಜನೆ ಇದೀಗ ಮಾರ್ಚ್ 6ರಂದು ಉದ್ಘಾಟನೆಗೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!