ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ಅಂತ್ಯಗೊಂಡಿದ್ದು, ಹಲವು ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿದ್ದು, ಬಹುತೇಕ ಸಮೀಕ್ಷೆಗಳು ಮತ್ತೆ ಮಹಾರಾಷ್ಟ್ರದಲ್ಲಿ ಮಹಾಯುತಿ ಒಕ್ಕೂಟ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿವೆ. ಆದಕ್ಕೆ ಇನ್ನೂ ಎರಡು ಚುನಾವಣಾ ಸಮೀಕ್ಷೆಗಳು ಸೇರಿದ್ದು, ಮಹಾಯುತಿ ಮೈತ್ರಿಕೂಟಕ್ಕೆ ಸ್ಪಷ್ಟ ಗೆಲುವನ್ನು ನೀಡಿವೆ.
ಟುಡೇಸ್ ಚಾಣಕ್ಯ ಮತ್ತು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ದೊಡ್ಡ ಗೆಲುವು ಸಾಧಿಸಲಿದೆ ಎಂದಿವೆ.
ಆಕ್ಸಿಸ್ ಮೈ ಇಂಡಿಯಾ
ಮಹಾಯುತಿ 178-200, ಎಂವಿಎ 82-102, ವಿಬಿಎ 0, ಇತರೆ 6-12
ಟುಡೇಸ್ ಚಾಣಕ್ಯ
ಬಿಜೆಪಿ+ 175 (11 ಪ್ಲಸ್ or ಮೈನಸ್), ಕಾಂಗ್ರೆಸ್+ 100 (11 ಪ್ಲಸ್ or ಮೈನಸ್), ಇತರೆ 13 (5 ಪ್ಲಸ್ or ಮೈನಸ್)