Friday, December 8, 2023

Latest Posts

VIRAL VIDEO| ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ..ಟೆನ್ನಿಸ್ ಅಂಗಳದಲ್ಲೂ ಧೋನಿ ಮಿಂಚಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಮಾಜಿ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಆಟದ ಶೈಲಿಯಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಮಹಿ ಫೀಲ್ಡ್‌ನಲ್ಲಿದ್ದಾರೆ ಎಂದರೆ ಎದುರಾಳಿ ತಂಡದ ಗೆಲುವಿನ ನಿರೀಕ್ಷೆ ಹುಸಿಯಾಗುತ್ತದೆ. ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೂ ಅಥವಾ ಕೆಳಭಾಗದಲ್ಲಿ ಬಂದರೂ ಮೈದಾನದಲ್ಲಿ ಬೌಂಡರಿಗಳ ಮಹಾಪೂರವನ್ನು ಹೊಡೆಯುವುದು ಅವರ ವಿಶೇಷತೆಯಾಗಿದೆ.

ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ಟೆನಿಸ್‌ನಲ್ಲೂ ಧೋನಿ ಮಿಂಚುತ್ತಿದ್ದಾರೆ ಇದಕ್ಕೆ ನಿದರ್ಶನವೆಂಬಂತೆ ಇತ್ತೀಚಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹೇಂದರ್ ಸಿಂಗ್ ಧೋನಿ ಕ್ರಿಕೆಟ್ ಜೊತೆಗೆ ಟೆನಿಸ್ ಅನ್ನು ತುಂಬಾ ಇಷ್ಟಪಡುತ್ತಾರೆ ಎಂದು ತಿಳಿದಿದೆ. ಧೋನಿ ಇತ್ತೀಚೆಗೆ ಟೆನಿಸ್ ಪಂದ್ಯವೊಂದರಲ್ಲಿ ಡಬಲ್ಸ್ ಆಡುತ್ತಿದ್ದರು. ಟೆನಿಸ್ ಅಂಗಣದಲ್ಲಿ ಧೋನಿ ಸಕ್ರಿಯವಾಗಿ ಚಲಿಸುತ್ತಿರುವುದು ಕಂಡುಬಂದಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಸ್ಟರ್ ಕೂಲ್ ಅವರು ಎಲ್ಲಿ ಬೇಕಾದರೂ ಮಿಂಚುತ್ತಾರೆ ಎಂದು ಅಭಿಮಾನಿಗಳು ಹೊಗಳಿದ್ದಾರೆ. ಇನ್ನು ಕೆಲವರು ಧೋನಿಯ ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!