ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಈಗಾಗಲೇ 130 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಪ್ರಾದೇಶಿಕ ಸಿನಿಮಾಗಳಲ್ಲಿ ಹೊಸ ದಾಖಲೆ ಬರೆಯಲಿದೆ. ಸೋಮವಾರ ರಾತ್ರಿ ಕರ್ನೂಲ್‌ನ ಎಸ್‌ಟಿಬಿಸಿ ಕಾಲೇಜು ಮೈದಾನದಲ್ಲಿ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಬಹಳ ಅದ್ದೂರಿಯಾಗಿ ನಡೆಯಿತು. ಮೊಟ್ಟಮೊದಲ ಬಾರಿಗೆ ಸ್ಟೇಜ್ ಮೇಲೆ ಪ್ರಿನ್ಸ್ ಡಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಒಕ್ಕಡು ಸಿನಿಮಾ ವೇಳೆ ಕರ್ನೂಲ್‌ಗೆ ಬಂದಿದ್ದೆ, ಮತ್ತೆ ಇಷ್ಟು ವರ್ಷ ಬೇಕಾಯಿತು. ಕರ್ನೂಲ್‌ನಲ್ಲಿ ಸಕ್ಸಸ್ ಪಾರ್ಟಿ ಈವೆಂಟ್ ಮಾಡ್ತೇವೆ ಅಂದಾಗ. ಹಿಂದೆ ಮುಂದೆ ನೋಡದೆ ಒಕೆ ಎಂದೆ. ಈ ಸಿನಿಮಾವನ್ನು ಯಶಸ್ವಿಗೊಳಿಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಚಿರಋಣಿ. ಈ ರೀತಿಯ ಅಭಿಮಾನಿಗಳನ್ನು ಪಡೆಯಲು ಈ ಜನ್ಮದಲ್ಲಿ ನಾನು ತುಂಬಾ ಅದೃಷ್ಟಶಾಲಿ ಎಂದುರು.
ಕಾರ್ಯಕ್ರಮದ ಮಧ್ಯದಲ್ಲಿ ತಮನ್ ಮಾ..ಮಾ.. ಮಹೇಶ್ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ತುಂಬಾ ಸೈಲೆಂಟ್ ಆಗಿರುವ ಮಹೇಶ್, ಜೀವನದಲ್ಲಿ ಮೊದಲ ಬಾರಿಗೆ ಅಭಿಮಾನಿಗಳಿಗಾಗಿ ಈ ರೀತಿ ಡ್ಯಾನ್ಸ್ ಮಾಡಿದ್ದೇನೆ ಎಂದಿದ್ದಾರೆ.