Monday, November 28, 2022

Latest Posts

ಅಣ್ಣ, ತಾಯಿ ಇದೀಗ ತಂದೆ: ಒಂದೇ ವರ್ಷದಲ್ಲಿ ಮೂವರನ್ನು ಕಳೆದುಕೊಂಡ ಮಹೇಶ್‌ ಬಾಬು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಂಧ್ರ ಜೇಮ್ಸ್ ಬಾಂಡ್, ಸೂಪರ್‌ ಸ್ಟಾರ್ ಕೃಷ್ಣ ಇಹಲೋಕ ತ್ಯಜಿಸಿದ್ದಾರೆ. ಭಾನುವಾರ ಮಧ್ಯರಾತ್ರಿ ಉಸಿರಾಟದ ತೊಂದರೆಗೆ ಈಡಾಗಿದ್ದ ಕೃಷ್ಣ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಎಲ್ಲ ಪ್ರಯತ್ನ ಮಾಡಿದರೂ ಇಂದು ಮುಂಜಾನೆ 4:09ಕ್ಕೆ ಕೊನೆಯುಸಿರೆಳೆದಿದ್ದಾರೆ.

ಎರಡು ತಿಂಗಳ ಹಿಂದೆ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಕೂಡ ವಿಧಿವಶರಾಗಿದ್ದರು. ಮಹೇಶ್ ಬಾಬು ಈಗೀಗ ಘಟನೆಯಿಂದ ಚೇತರಿಸಿಕೊಂಡು ತಮ್ಮ ಸಿನಿಮಾಗಳತ್ತ ಗಮನ ಹರಿಸುತ್ತಿದ್ದರು. ಅಷ್ಟರಲ್ಲೇ ಇದೀಗ ತಂದೆಯನ್ನು ಕಳೆದುಕೊಂಡಿರುವುದು ಮತ್ತಷ್ಟು ದುಃಖವನ್ನು ತಂದೊಡ್ಡಿದೆ. ಇದಲ್ಲದೆ, ಜನವರಿಯಲ್ಲಿ ಮಹೇಶ್ ಅವರ ಅಣ್ಣ ರಮೇಶ್ ಬಾಬು ಕೂಡ ನಿಧನರಾಗಿದ್ದರು. ಆಗ ಮಹೇಶ್ ಬಾಬು ಸಿನಿಮಾ ಶೂಟಿಂಗ್‌ನಲ್ಲಿ ವಿದೇಶದಲ್ಲಿದ್ದರಿಂದ ಅಂತ್ಯಸಂಸ್ಕಾರಕ್ಕೂ ಬಂದಿರಲಿಲ್ಲ.

ಒಂದೇ ವರ್ಷದಲ್ಲಿ ಕುಟುಂಬದ ಮೂವರನ್ನು ಕಳೆದುಕೊಂಡಿರುವುದು ಮಹೇಶ್ ಗೆ ಅಪಾರ ನಷ್ಟ ಎಂದೇ ಹೇಳಬೇಕು. ಈ ವರ್ಷ ಮಹೇಶ್ ಬಾಬುಗೆ ಬದುಕಿನಲ್ಲಿ ಕತ್ತಲನ್ನು ಆವರಿಸಿದ ವರ್ಷವೆಂದರೆ ತಪ್ಪಾಗಲಾರದು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೃಷ್ಣ ಅವರನ್ನು ವೈದ್ಯರು ಎಲ್ಲ ಪ್ರಯತ್ನ ಮಾಡಿದರೂ ದೇವರು ಕರುಣೆ ತೋರಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!