Sunday, December 3, 2023

Latest Posts

CINE| ಟಾಲಿವುಡ್‌ ನಟ ಮಹೇಶ್‌ ಬಾಬುರಿಂದ ಮತ್ತೊಂದು ಮಹತ್ವದ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ವರ್ಷ ನವೆಂಬರ್ 15 ರಂದು ಸೂಪರ್ ಸ್ಟಾರ್ ಕೃಷ್ಣ ಅವರು ವಿಧಿವಶರಾದ ವಿಷಯ ಗೊತ್ತೇ ಇದೆ. ಅವರು ನಿಧನರಾಗಿ ನಿನ್ನೆಗೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಘಟ್ಟಮನೇನಿ ಕುಟುಂಬವು ಹೈದರಾಬಾದ್‌ನಲ್ಲಿ ಸ್ಮರಣಾರ್ಥ ದಿನವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಟ ಮಹೇಶ್‌ ಬಾಬು ಮಹತ್ತರವಾದ ನಿರ್ಧಾರವನ್ನು ಘೋಷಿಸಿದರು.

ಮಹೇಶ್ ಬಾಬು ಫೌಂಡೇಶನ್ ವತಿಯಿಂದ ಸೂಪರ್ ಸ್ಟಾರ್ ಕೃಷ್ಣ ಎಜುಕೇಶನಲ್ ಫಂಡ್ ಎಂಬ ಹೊಸ ಸಾಮಾಜಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಬಡತನದಿಂದ ಓದಲು ಸಾಧ್ಯವಾಗದ 40 ವಿದ್ಯಾರ್ಥಿಗಳಿಗೆ ಮಹೇಶ್ ಬಾಬು ಈ ಕಾರ್ಯಕ್ರಮದ ಮೂಲಕ ಶಿಕ್ಷಣ ನೀಡಲಿದ್ದಾರೆ. ಶಾಲೆಯಿಂದ ಕಾಲೇಜಿನವರೆಗೆ ಅವರ ಎಲ್ಲಾ ಶೈಕ್ಷಣಿಕ ಜವಾಬ್ದಾರಿಗಳನ್ನು ಮಹೇಶ್ ಬಾಬು ನೋಡಿಕೊಳ್ಳುತ್ತಾರೆ. ಮಹೇಶ್ ಬಾಬು ಅವರ ಈ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಎಂಬಿ ಫೌಂಡೇಶನ್ ಮೂಲಕ ಮಹೇಶ್ ಬಾಬು ಹಲವು ಮಕ್ಕಳಿಗೆ ಹೃದ್ರೋಗ ಚಿಕಿತ್ಸೆ ಕೊಡಿಸುತ್ತಿರುವ ವಿಚಾರ ತಿಳಿದಿರುವ ಸಂಗತಿ. ಇದರ ಜೊತೆಗೆ ಕೆಲವು ಹಲ್ಳಿಗಳನ್ನು ದತ್ತು ತೆಗೆದುಕೊಂಡು, ಅವುಗಳ ಅಭಿವೃದ್ಧಿ ಕಾರ್ಯದ ಜೊತೆ ಜೊತೆಗೆ ಇದೀಗ ಮಕ್ಕಳ ಶಿಕ್ಷಣದತ್ತಲೂ ಹಮನ ಹರಿಸಿದ್ದಾರೆ. ಮಹೇಶ್ ಬಾಬು ಮಕ್ಕಳು ಗೌತಮ್ ಮತ್ತು ಸಿತಾರಾ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಬಡ ಮಕ್ಕಳೊಂದಿಗೆ ಆಚರಿಸಿ ಅವರಿಗೂ ಸಹಾಯ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!