Thursday, August 18, 2022

Latest Posts

ಬಿಲ್‌ಗೇಟ್ಸ್‌ ಭೇಟಿಯಾದ ಮಹೇಶ್‌ ಬಾಬು ದಂಪತಿ, ಫೋಟೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್‌ಸ್ಟಾರ್ ಮಹೇಶ್ ಬಾಬು ಸರ್ಕಾರು ವಾರಿ ಪಾಟ ಸಿನಿಮಾ ಯಶಸ್ಸಿನ ನಂತರ, ತಮ್ಮ ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹಾರಿದರು. ಯುರೋಪಿನಾದ್ಯಂತ ಕುಟುಂಬದೊಂದಿಗೆ ಎಂಜಾಯ್‌ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ನ್ಯೂಯಾರ್ಕ್‌ಗೆ ಬಂದಿಳಿದ ಮಹೇಶ್‌ ವಿಶ್ವ ದೊರೆ ಹಾಗೂ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದ್ದಾರೆ.

ಬುಧವಾರ ಬೆಳಗ್ಗೆ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಅವರೊಂದಿಗೆ ಬಿಲ್‌ಗೇಟ್ಸ್‌ ಅವರನ್ನು ಭೇಟಿಯಾಗಿ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಕ್ಕೆ ಬಹಳ ಸಂತೋಷವಾಗಿದೆ. ವಿಶ್ವದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ತುಂಬಾ ಮೋಟಿವೇಟ್‌ ಮಾಡುತ್ತಾರೆ. ಇಂತಹ ಗೌರವಾನ್ವಿತ ವ್ಯಕ್ತಿಯನ್ನು ಭೇಟಿಯಾಗಿದ್ದಕ್ಕೆ ಖುಷಿಯಾಗಿದೆ ಎಂದು ತಮ್ಮ ಇನ್ಸ್‌ಟಾ ಗ್ರಾಂ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭೇಟಿ ಬಳಿಕ ಮಹೇಶ್ ದಂಪತಿ ಬಿಲ್ ಗೇಟ್ಸ್ ಜೊತೆ ಕೆಲ ಕಾಲ ಕಳೆದರು.

Mahesh Babu and Namrata Shirodkar posed for a photo with Bill Gates in New York.

ಬಿಲ್ ಗೇಟ್ಸ್ ಜೊತೆ ಮಹೇಶ್ ಇರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿನ್ಸ್ ಅಭಿಮಾನಿಗಳು ಈ ಫೋಟೋವನ್ನು ಹೆಚ್ಚು ಶೇರ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಮಹೇಶ್ ಭಾರತಕ್ಕೆ ಹಿಂತಿರುಗಿ ತ್ರಿವಿಕ್ರಮ್‌ ಸಿನಿಮಾ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!