ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹೇಶ್ ಬಾಬು ಸದ್ಯ ಗುಂಟೂರು ಖಾರಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಧ್ಯವಾದಾಗಲೆಲ್ಲಾ ಫಾರಿನ್ ಟೂರ್‌ನಲ್ಲಿ ಮಹೇಶ್ ಬಾಬು ಎಂಜಾಯ್ ಮಾಡ್ತಿದಾರೆ. ಈ ನಡುವೆ ಜಾಹೀರಾತುಗಳಲ್ಲೂ ಸಕ್ರಿಯರಾಗಿದ್ದಾರೆ.
ಮಹೇಶ್ ಇತ್ತೀಚೆಗೆ ಹೊಸ ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಮ್ರತಾ ಶಿರೋಡ್ಕರ್ ಈ ಜಾಹೀರಾತು ಚಿತ್ರೀಕರಣಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ. ಈ ಫೋಟೋಗಳಲ್ಲಿ ಮಹೇಶ್ ಅದ್ಭುತವಾಗಿ ಕಾಣುತ್ತಿದ್ದಾರೆ. ತಮ್ಮ ಹೊಸ ಹೇರ್ ಸ್ಟೈಲ್‌ನಿಂದ ಮಹೇಶ್ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಕೇಶವಿನ್ಯಾಸವನ್ನು ಪ್ರಸಿದ್ಧ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಮಾಡಿದ್ದಾರೆ. ಈ ಫೋಟೋದಲ್ಲಿ ಮಹೇಶ್ ಪಕ್ಕದಲ್ಲಿ ಅಲೀಂ ಖಾನ್ ಕೂಡ ಇದ್ದಾರೆ.
ಇದರಿಂದಾಗಿ ಹಾಲಿವುಡ್ ಹೀರೋ ಇದ್ದಂತೆ ಮಹೇಶ್ ಅವರ ಹೊಸ ಲುಕ್ ಅದ್ಭುತವಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಲುಕ್‌ನೊಂದಿಗೆ ಒಂದು ಆಕ್ಷನ್ ಚಿತ್ರ ಮಾಡಿದರೆ, ಎಲ್ಲಾ ದಾಖಲೆಗಳು ಮುರಿದುಹೋಗುತ್ತವೆ ಎಂಬುದು ಅಭಿಮಾನಿಗಳ ಬಯಕೆ. 48ರ ಹರೆಯದಲ್ಲೂ ಮಹೇಶ್ ಯುವಕನಂತೆಯೇ ಕಾಣಿಸುತ್ತಾರೆ ಎಂಬ ಅಭಿಪ್ರಾಯಗಳೂ ಬರುತ್ತಿವೆ.