CINE | ಇನ್ಮುಂದೆ ಹೊರಗೆಲ್ಲೂ ಕಾಣಿಸೋದಿಲ್ಲ ಮಹೇಶ್‌ಬಾಬು, ಇದಕ್ಕೆ ಕಾರಣ ರಾಜಮೌಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಯಾವುದು? ಈ ಬಾರಿ ಯಾವ ನಟನ ಜೊತೆ ಕೆಲಸ ಮಾಡಲಿದ್ದಾರೆ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ದೃಶ್ಯಕಾವ್ಯಗಳ ಮಾಂತ್ರಿಕ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ತೆಲುಗು ನಟ ಮಹೇಶ್ ಬಾಬು ಜೊತೆ ಮಾಡ್ತಿದ್ದಾರೆ.

ಇದಕ್ಕೂ ಮುನ್ನ ನಟ ಮಹೇಶ್‌ಬಾಬುಗೆ ರಾಜಮೌಳಿ ಕಂಡೀಷನ್ ಹಾಕಿದ್ದಾರೆ. ಇದರ ಪ್ರಕಾರ ಮಹೇಶ್ ಬಾಬು ಹೊರಗೆ ಬರುವಂತಿಲ್ಲ, ಮಾಧ್ಯಮಗಳ ಕಣ್ಣಿಗೆ ಬೀಳುವಂತಿಲ್ಲ.

ತಮ್ಮ ಸಿನಿಮಾದ ಲುಕ್ ಈಗಲೇ ಗೊತ್ತಾಗೋದು ಬೇಡ ಅನ್ನೋ ಕಾರಣದಿಂದ ರಾಜಮೌಳಿ ಹೀಗೆ ಮಾಡಿದ್ದಾರೆ. ಮಹೇಶ್ ಬಾಬು ಲುಕ್ ಬದಲಾವಣೆಗಾಗಿ ಹಾಲಿವುಡ್ ಟ್ರೇನರ್ ಆಗಮಿಸಿದ್ದಾರೆ.

ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಹಿಂದೆಂದೂ ಕಾಣದಂಥ ಪಾತ್ರದಲ್ಲಿ ಮಹೇಶ್ ಬಾಬು ಕಾಣಲಿದ್ದಾರೆ. ಇದೆಲ್ಲವನ್ನೂ ನೋಡಿ ಪ್ರೇಕ್ಷಕನಿಗೆ ಸಿನಿಮಾ ಬಗ್ಗೆ ಸಾಕಷ್ಟು ಭರವಸೆ ಮೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!