ಹೊಸದಿಗಂತ ವರದಿ,ಮೈಸೂರು:
ಮಹಿಷ ದಸರಾ ಆಚರಣೆಯನ್ನು ಚಾಮುಂಡಿಬೆಟ್ಟದಲ್ಲಿ ಮಾಡುವ ಬದಲು ಮೈಸೂರು ನಗರದೊಳಗಿರುವ ಟೌನ್ ಹಾಲ್‌ನಲ್ಲಿ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟದ ಬದಲಾಗಿ ಮೈಸೂರಿನ ಟೌನ್‌ಹಾಲ್‌ನಲ್ಲಿ ಮಹಿಷ ದಸರಾ ಆಚರಿಸುತ್ತೇವೆ. ಕಾರ್ಯಕ್ರಮ ನಡೆಸಲು ನಗರ ಪೋಲಿಸ್ ಕಮಿಷನರ್ ಕಚೇರಿಯಿಂದ ಅನುಮತಿ ಪಡೆದಿದ್ದು, ಶಾಂತಿಯುತವಾಗಿ ಮಹಿಷ ದಸರಾ ಮಾಡುತ್ತೇವೆ. ನಮ್ಮ ಹೆಸರಿಗೆ ಕಳಂಕ ತರಲು ಯಾರಾದರೂ ಅಹಿತಕರ ಘಟನೆಗೆ ಕುಮ್ಮಕ್ಕು ನೀಡಿದರೆ, ನಾವು ಜವಾಬ್ದಾರರಲ್ಲ ಎಂದು ಹೇಳಿದರು.