‘ಮೈನೇ ಪ್ಯಾರ್​ ಕಿಯಾ’ ನಟಿ ಭಾಗ್ಯಶ್ರೀಗೆ ಗಂಭೀರ ಗಾಯ?: ಫೋಟೋ ನೋಡಿ ಫ್ಯಾನ್ಸ್‌ ಶಾಕ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

1989ರ ಬಾಲಿವುಡ್​ ನಟಿ ಭಾಗ್ಯಶ್ರೀ ಈಗಲೂ ಎವರ್​ಗ್ರೀನ್ ಅಂದರೆ ತಪ್ಪಾಗಲಾರದು.

ಆಕರ್ಷಕ ನಗು, ಒಲವಿನ ಕಣ್ಣುಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಭಾಗ್ಯಶ್ರೀ ಅವರಿಗೆ ಈಗ 55 ವರ್ಷ ವಯಸ್ಸು. ಭಾಗ್ಯಶ್ರೀ ನಟನೆಯ ಬ್ಲಾಕ್‌ಬಸ್ಟರ್‌ ರೊಮ್ಯಾಂಟಿಕ್‌ ಸಿನಿಮಾ ‘ಮೈನೆ ಪ್ಯಾರ್‌ ಕಿಯಾ’ ಇಂದಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ಇದರಲ್ಲಿ ಸಲ್ಮಾನ್​ ಖಾನ್​ ಮತ್ತು ಭಾಗ್ಯಶ್ರೀ ನಟನೆಗೆ ಅಭಿಮಾನಿಳು ಫಿದಾ ಆಗಿದ್ದರು.
ಬಳಿಕ ನಟಿ ಭಾಗ್ಯಶ್ರೀ ಮದುವೆ ನಂತರ ಬ್ರೇಕ್ ಪಡೆದಿದ್ದರು. ಆ ನಂತರ 2019ರಲ್ಲಿ ಮತ್ತೆ ಕನ್ನಡದ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ವಾಪಸ್ ಆಗಿದ್ದರು.

ಆದರೆ, ಇದೀಗ ನಟಿ ಭಾಗ್ಯಶ್ರೀ ಅವರ ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌ ಒಂದು ಹೊರಬಿದ್ದಿದೆ. ಅದೇನೆಂದರೆ, ನಟಿಯ ಹಣೆಗೆ 13 ಹೊಲಿಗೆಗಳನ್ನು ಹಾಕಲಾಗಿದೆ.

ಪಿಕ್‌ಬಾಲ್ ಆಡುವಾಗ ಈ ದುರ್ಘಟನೆ ಸಂಭವಿಸಿದೆ. ನಟಿಯ ಹಣೆಯ ಮೇಲೆ ಆಳವಾದ ಗಾಯ ಆಗಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 13 ಹೊಲಿಗೆಗಳನ್ನು ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಭಾಗ್ಯಶ್ರೀ ಅವರು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅವರ ಹೆಲ್ತ್ ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಆದಷ್ಟು ಬೇಗ ಭಾಗ್ಯಶ್ರೀ ಅವರು ಚೇತರಿಸಿಕೊಳ್ಳಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

ಪಿಕಲ್​ಬಾಲ್​ ಆಟದ ಬಗ್ಗೆ ಭಾಗ್ಯಶ್ರೀ ಅವರು ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ ಅವರು ಪಿಕಲ್​ಬಾಲ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಪರೇಷನ್​ ಥಿಯೇಟರ್​ನಲ್ಲಿ ಭಾಗ್ಯಶ್ರೀ ಅವರು ಮಲಗಿರುವ ಫೋಟೋ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಗಾಬರಿ ಆಗಿದೆ. ಆದರೆ ಆತಂಕಪಡುವಂಥದ್ದು ಏನೂ ಇಲ್ಲ. ಸರ್ಜರಿ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!