September 13, 2026
Sunday, September 13, 2026
spot_img

‘ಮೈಸಾ’ ಪೋಸ್ಟರ್ ರಿಲೀಸ್: ರಶ್ಮಿಕಾ ಮಂದಣ್ಣ ರಗಡ್ ಅವತಾರ ನೋಡಿ ಬಾಕ್ಸ್ ಆಫೀಸ್ ಶೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಖತ್ ಖುಷಿ ಕೊಡುವಂತ ಸುದ್ದಿಯೊಂದು ಹೊರಬಿದ್ದಿದೆ. ರಶ್ಮಿಕಾ ನಟಿಸುತ್ತಿರುವ ಬಹುನಿರೀಕ್ಷಿತ ‘ಮೈಸಾ’ ಸಿನಿಮಾದ ರಿಲೀಸ್ ಡೇಟ್‌ ಅನ್ನು ಚಿತ್ರತಂಡ ಕೊನೆಗೂ ಅಫಿಷಿಯಲ್ ಆಗಿ ಅನೌನ್ಸ್ ಮಾಡಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಮಾಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೇ ವರ್ಷ ನವೆಂಬರ್ 27, 2026 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಸಿನಿಮಾ ತಂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಶೇರ್ ಮಾಡಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಕೇವಲ ಗ್ಲಾಮರ್ ಅಲ್ಲ, ಕಂಪ್ಲೀಟ್ ರಫ್ ಅಂಡ್ ಟಫ್ ‘ಗೋಂಡ್’ ಬುಡಕಟ್ಟು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಪಟ್ಟ ಶ್ರಮ ಸಣ್ಣದಲ್ಲ.

https://www.instagram.com/rashmika_mandanna/p/DcvLwrrs7D9/?hl=en

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ನೀರಿನ ಅಡಿಯಲ್ಲಿ ಹೈ-ವೋಲ್ಟೇಜ್ ಆಕ್ಷನ್ ಸೀನ್ ಮಾಡಿದ್ದಾರೆ.

ಈ ಸಾಹಸ ದೃಶ್ಯಗಳ ಶೂಟಿಂಗ್ ಮಾಡುವಾಗ ರಶ್ಮಿಕಾ ತೀವ್ರವಾಗಿ ಗಾಯಗೊಂಡಿದ್ದರು. ಆದರೂ ಛಲ ಬಿಡದೆ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್ ಅಂಗಳಕ್ಕೆ ಕಮ್‌ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. “ನನ್ನ ದೇಹವನ್ನು ಮನುಷ್ಯನ ತರ ನೋಡೋದು ಬಿಟ್ಟು ಯಂತ್ರದ ತರ ಬಳಸಿಬಿಟ್ಟೆ, ಗಾಯಗಳಾಗೋದು ಕಿರಿಕಿರಿ ಅನಿಸುತ್ತೆ. ಆದರೆ ಈಗ ನಾನು ಚೇತರಿಸಿಕೊಳ್ಳುತ್ತಿದ್ದೇನೆ, ಶೀಘ್ರದಲ್ಲೇ ಶೂಟಿಂಗ್‌ಗೆ ವಾಪಸ್ ಆಗ್ತೀನಿ” ಅಂತ ರಶ್ಮಿಕಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ರಶ್ಮಿಕಾ ಜೊತೆಗೆ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಅವರಂತಹ ಪ್ರಭಾವಿ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !