ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ನ, ರಸಂ ಸಾಂಬಾರ್, ಪಲಿ, ಚಪಾತಿ ಹೀಗೆ ಹಲವು ಡಿಶ್ಗಳ ಜೊತೆ ಕ್ರಿಸ್ಪಿಯಾಗಿ ತಿನ್ನಲು ಅವಶ್ಯಕವಾಗಿ ಕೆಲವರು ಮಜ್ಜಿಗೆ ಮೆಣಸಿನಕಾಯಿ ಇಷ್ಟಪಡುವುದು ಕಾಮನ್. ಅದನ್ನು ಮನೆಯಲ್ಲಿಯೇ ಹೇಗೆ ಮಾಡೋದು ಎಂದು ತಿಳಿಯೋಣ. ಒಂದು ವರ್ಷದವರೆಗೆ ಕೆಡದೆ ಹಾಗೆ ಇರುತ್ತದೆ.
ಬೇಕಾಗುವ ಪದಾರ್ಥಗಳು:
ಒಂದು ಕೆಜಿ ಮೆಣಸಿನಕಾಯಿ
ಅರ್ಧ ಲೀಟರ್ ಗಟ್ಟಿ ಮೊಸರು, ಉಪ್ಪು
ಮಾಡುವ ವಿಧಾನ:
ಉದ್ದವಾದ ಹಸಿ ಮೆಣಸಿನಕಾಯಿ ತೆಗೆದುಕೊಂಡು ಅದರ ಹೊಟ್ಟೆಯನ್ನು ಉದ್ದಕ್ಕೆ ಸೀಳಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ ಅವಶ್ಯಕತೆಯಿದ್ದಷ್ಟು ಮೊಸರು ಹಾಕಿ ಚೆನ್ನಾಗಿ ಉಂಡೆಯಿಲ್ಲದಂತೆ ಮಜ್ಜಿಗೆ ಮಾಡಿ. ಹೆಚ್ಚು ತೆಳುವಾಗಿ ಇರಬಾರದು, ಮಂದವಾಗಿಯೂ ಇರಬಾರದು. ಬಳಿಕ ಅದಕ್ಕೆ ಉರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಕಿ. ಉಪ್ಪು ಕರಗಿದ ಬಳಿಕ ಮೆಣಸಿನಕಾಯಿಯನ್ನು ಗಾಳಿಯಾಡದ ಟಪ್ಪರ್ ವೇರ್ ಬಾಕ್ಸ್ ನೊಳಗೆ ಹಾಕಿ ಅದರ ಮೇಲೆ ಮಜ್ಜಿಗೆ ಹಾಕಿ ಒಂದು ದಿನ ಪೂರ್ತಿ ನೆನೆಯಲು ಬಿಡಬೇಕು. ನಂತರ ಬೆಳಗ್ಗೆ ಅದನ್ನು ತೆಗೆದಿ ಒಂದು ತಟ್ಟೆ ಮೇಲೆ ಬಿಸಿಲಿಗೆ ಸಂಜೆವರೆಗೆ ಒಣಗಲು ಬಿಡಿ. ಹೀಗೆ ಮೂರು ದಿನ ತಪ್ಪದೆ ಮಾಡಿ. ಬೇರೆ ಮಜ್ಜಿಗೆ ಬಳಸುವಂತಿಲ್ಲ ಅದೇ ಮಜ್ಜಿಗೆಗೆ ಪ್ರತಿದಿನ ಹಾಕಿ ತೆಗೆದು ಬಿಸಿಲಿಗೆ ಒಣಗಿಸಿದರೆ ಮಜ್ಜಿಗೆ ಮೆಣಸಿನಕಾಯಿ ರೆಡಿ. ಒಂದು ವರ್ಷದವರೆಗೆ ಕೆಡದೆ ಹಾಗೆಯೇ ಇರುತ್ತದೆ. ಬೇಕಾದಾಗ ಎಣ್ಣೆಗೆ ಕರಿದು ಸವಿಯಬಹುದು.