ಕೋಲ್ಕತ್ತಾ ಮೆಟ್ರೋದಲ್ಲಿ ಭಾರೀ ಅಪಘಾತ: 2 ಗಂಟೆಗಳ ಕಾಲ ಸೇವೆ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಟ್ರೋ ನಿಲ್ದಾಣದ ಮೇಲ್ಸೇತುವೆಯಲ್ಲಿ ಬಿರುಕು ಕಂಡುಬಂದಿದ್ದರಿಂದ ಎರಡು ಗಂಟೆಗಳ ಕಾಲ ಸೇವೆ ಸ್ಥಗಿತವಾದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಮೈದಾನದ ನಿಲ್ದಾಣದಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ಆ ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ನಿಲ್ಲಿಸಿದರು. ಇದರಿಂದ ಮೆಟ್ರೊಗೆ ಸಂಭವಿಸುವ ದೊಡ್ಡ ಅಪಘಾತವನ್ನು ಸ್ವಲ್ಪದರಲ್ಲೇ ತಪ್ಪಿಸಲಾಗಿದೆ. ಈ ಘಟನೆಯಿಂದಾಗಿ ಟೋಲಿಗಂಜ್‌ನಿಂದ ಮಹಾತ್ಮ ಗಾಂಧಿ ರಸ್ತೆಗೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು ಎರಡೂವರೆ ಗಂಟೆಗಳ ನಂತರ ಸೇವೆಗಳನ್ನು ಪುನಃಸ್ಥಾಪಿಸಲಾಯಿತು.

ಮಾಹಿತಿ ಪಡೆದ ಮೆಟ್ರೋ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾಲಿನಲ್ಲಿ ಬಿರುಕು ಕಂಡಿತು. ಕೂಡಲೇ ಬಿರುಕುಗಳನ್ನು ಸರಿಪಡಿಸುವ ಕಾರ್ಯ ಆರಂಭವಾಗಿದೆ. ಸಂಜೆ 6.30ಕ್ಕೆ ಮೈದಾನದ ಮೇಲ್ಸೇತುವೆಯಲ್ಲಿ ದುರಸ್ತಿ ಕಾರ್ಯ ಮುಗಿದ ಬಳಿಕವೇ ಸೇವೆ ಆರಂಭವಾಯಿತು.

ಭಾನುವಾರ ಮಧ್ಯಾಹ್ನ ಮೈದಾನ ಮತ್ತು ಪಾರ್ಕ್ ಸ್ಟ್ರೀಟ್ ನಿಲ್ದಾಣಗಳ ನಡುವಿನ ಅಪ್ ಲೈನ್‌ನಿಂದ ಚಾಲಕನೊಬ್ಬ ಅಸಾಮಾನ್ಯ ಶಬ್ದವನ್ನು ಕೇಳಿದ್ದಾನೆ ಎಂದು ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರ ನಂತರ, ಮಹಾತ್ಮ ಗಾಂಧಿ ರಸ್ತೆ (ಎಂಜಿ ರಸ್ತೆ) ಮತ್ತು ಟಾಲಿಗಂಜ್ ನಿಲ್ದಾಣದ ನಡುವಿನ ಸೇವೆಗಳನ್ನು ಮಧ್ಯಾಹ್ನ 3.15 ರಿಂದ ನಿಲ್ಲಿಸಲಾಯಿತು. ಮೆಟ್ರೋ ದಕ್ಷಿಣೇಶ್ವರದಿಂದ ಗಿರೀಶ್ ಪಾರ್ಕ್ ವರೆಗೆ ಚಲಿಸುತ್ತದೆ ನಂತರ ಸಂಜೆ 5:45ಕ್ಕೆ ಸೇವೆಯನ್ನು ಪುನಃ ಸ್ಥಾಪಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!