ಪ್ರಬಲ ಭೂಕಂಪಕ್ಕೆ ಟರ್ಕಿ ತತ್ತರ: ಕಟ್ಟಡಗಳು ನೆಲಸಮ, ಭರದಿಂದ ಸಾಗಿದ ರಕ್ಷಣಾ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಮವಾರ ಮುಂಜಾನೆ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮತ್ತು ಲೆಬನಾನ್ ಮತ್ತು ಸಿರಿಯಾದ ಗಡಿಯುದ್ದಕ್ಕೂ ಭೂಕಂಪದ ಅನುಭವವಾಗಿದೆ.

ಸ್ಥಳೀಯ ಕಾಲಮಾನ ಮುಂಜಾನೆ 4:17ಕ್ಕೆ (0117 GMT) ಭೂಕಂಪ ಸಂಭವಿಸಿದೆ. ಇದು ದೇಶದ ಆಗ್ನೇಯ ಭಾಗದಲ್ಲಿರುವ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ ಸುಮಾರು 32km (20 ಮೈಲುಗಳು) ಕೇಂದ್ರೀಕೃತವಾಗಿದೆ.

ಭೂಕಂಪವು ನೂರ್ದಾಗ್ ಪಟ್ಟಣದಿಂದ ಸುಮಾರು 26 ಕಿಮೀ (16 ಮೈಲಿ) ದೂರದಲ್ಲಿ ಸಂಭವಿಸಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ 17.7km (11 ಮೈಲುಗಳು) ಆಳದಲ್ಲಿ ಉಂಟಾಗಿದೆ. ಸುಮಾರು 10 ನಿಮಿಷಗಳ ಕಾಲ ಬಲವಾದ ಕಂಪನವು ಸದ್ದು ಮಾಡಿತು ಎಂದು ವರದಿಯಾಗಿದೆ. ಗಜಿಯಾಂಟೆಪ್‌ನ ದಕ್ಷಿಣ ಪ್ರದೇಶ ಟರ್ಕಿಯ ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ.  ಲೆಬನಾನ್, ಗ್ರೀಸ್, ಸಿರಿಯಾ, ಇಸ್ರೇಲ್ ಮತ್ತು ಸೈಪ್ರಸ್‌ನಲ್ಲಿ ಕಂಪನದ ಅನುಭವದ ವರದಿಗಳಿವೆ.

ಟರ್ಕಿಯ ಅಧಿಕಾರಿಗಳು ಇನ್ನೂ ಯಾವುದೇ ಸಾವು ನೋವುಗಳ ವರದಿ ಮಾಡಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ದೇಶದ ಆಗ್ನೇಯ ಭಾಗದ ಹಲವಾರು ನಗರಗಳಲ್ಲಿ ನಾಶವಾದ ಕಟ್ಟಡಗಳು ವೈರಲ್‌ ಆಗಿವೆ. ಸ್ಥಳಕ್ಕೆ ರಕ್ಷಣಾ ತಂಡ, ಅಗ್ನಿಶಾಮಕ ವಾಹನಗಳು ಭೇಟಿ ನೀಡಿರುವುದು ಕಂಡುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!