November 23, 2026
Monday, November 23, 2026
spot_img

ಹಟ್ಟಿಕೇರಿ ಗೌರಿಕೆರೆ ಬಳಿ ಭೀಕರ ಅಗ್ನಿ ಅವಘಡ: ನೂರಾರು ಗಿಡಮರಗಳು ಬೆಂಕಿಗಾಹುತಿ

ಹೊಸದಿಗಂತ ವರದಿ ಅಂಕೋಲಾ:

ನೌಕಾನೆಲೆ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿ ನೂರಾರು ಗಿಡಮರಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಹಟ್ಟಿಕೇರಿ ಗೌರಿಕೆರೆ ಪರಿಸರದಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದ ಗೌರಿಕೆರೆ ಸಮೀಪದ ಬಯಲು ಪ್ರದೇಶದ ಒಣ ಹುಲ್ಲಿಗೆ ಹೊತ್ತಿಕೊಂಡ ಬೆಂಕಿ ಅತಿವೇಗವಾಗಿ ಸುತ್ತ ಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿ ಗಿಡಮರಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿದ್ದು ಸುತ್ತ ಮುತ್ತಲಿನ ಪರಿಸರದಲ್ಲಿ ದಟ್ಟ ಹೊಗೆ ವ್ಯಾಪಿಸಿದೆ.

ಹಟ್ಟಿಕೇರಿಯ ಟೋಲ್ ಗೇಟ್ ಸುತ್ತ ಮುತ್ತಲಿನ ಪರಿಸರ ಹೊಗೆಯಿಂದ ಆವೃತ್ತವಾಗಿದ್ದು ಕೆಲ ಕಾಲ ವಾಹನ ಸವಾರರಿಗೆ ರಸ್ತೆ ಕಾಣದಂತ ಸ್ಥಿತಿ ನಿರ್ಮಾಣವಾಗಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ಇನ್ನಷ್ಟು ವ್ಯಾಪಿಸದಂತೆ ಕಾರ್ಯಾಚರಣೆ ನಡೆಸಿದ್ದು ಅವಘಡದಲ್ಲಿ ಪ್ರಾಣಿ,ಪಕ್ಷಿಗಳು ಬಲಿಯಾಗಿರುವ ಸಾಧ್ಯತೆ ಇದೆ.

Must Read

Skip to toolbar