ಮೇಜರ್​ ಕಿಮ್​ ಸಿಂಗ್​ಗೆ 100ರ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡನೇ ಮಹಾಯುದ್ಧ ಸೇರಿದಂತೆ ಮೂರು ಕದನಗಳಲ್ಲಿ ಭಾಗಿಯಾಗಿದ್ದ ನಿವೃತ್ತ ಮೇಜರ್​, ಉತ್ತರಾಖಂಡ ಕಿಮ್​ ಸಿಂಗ್​ ಕರ್ಕಿ ಅವರು 100 ವರ್ಷಗಳನ್ನು ಪೂರೈಸಿದ್ದಾರೆ. ಈ ಶತಕದ ಸಂಭ್ರಮವನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಒಟ್ಟುಗೂಡಿ ಆಚರಿಸಿದ್ದಾರೆ.
ಉತ್ತರಾಖಂಡದ ಪಿಥೋರಗಢ್‌ನ ಬೇರಿನಾಗ್ ಬುಗಾಡ್ ಗ್ರಾಮದಲ್ಲಿ ವಾಸಿಸುತ್ತಿರುವ ಮೇಜರ್ ಕಿಮ್ ಸಿಂಗ್ ಕರ್ಕಿ 1922ರಲ್ಲಿ ಜನಿಸಿದ್ದರು. ಇಂದು ಗ್ರಾಮದಲ್ಲಿ ಸಾಮೂಹಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ।

ವಿಶ್ವ ಯುದ್ಧದಲ್ಲಿ ಭಾಗಿ

ಕಿಮ್ ಸಿಂಗ್ ಕರ್ಕಿ 2ನೇ ವಿಶ್ವ ಮಹಾಯುದ್ಧ, 1965ರ ಚೀನಾದೊಂದಿಗಿನ ಯುದ್ಧ, 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಭಾಗವಹಿಸಿದ್ದರು. ಭಾರತೀಯ ಸೇನೆಯ ಆರ್ಮಿ ಮೆಡಿಕಲ್​ ಕಾರ್ಪ್ಸ್(ಎಎಂಸಿ)ಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!