ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕರಸಂಕ್ರಾಂತಿ ಶುಭದಿನ ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಮಕರಜ್ಯೋತಿ ದರುಶನವಾಗಿದೆ.
ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರ ಜ್ಯೋತಿ ಬೆಳಗಿದೆ. ಮೂರು ಬಾರಿ ಬೆಳಗಿದ ಜ್ಯೋತಿಯನ್ನು ಕಂಡು ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ.
ಮಕರವಿಳಕ್ಕು ದರುಶನವಾಗುತ್ತಿದ್ದಂತೆ ಭಕ್ತರು ಸ್ವಾಮಿಯೇ ಶರಣಮಯಪ್ಪ ಷೋಷಣೆ ಮೊಳಗಿಸಿದ್ದಾರೆ.
ಪದಂಳಂ ಅರಮನೆಯಿಂದ ಹೊರಟ ತಿರುವಾಭರಣ ಸರಿಸುಮಾರಿ 6 ಗಂಟೆ ಹೊತ್ತಿಗೆ ಸಾರಂಗುದಿ ತಲುಪಿದೆ. ಬಳಿಕ ದೇವಸ್ವಂ ಮಂಡಳಿ ಸದಸ್ಯರು ದೇಗುದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಿರುವಾಭರಣ ಸ್ವೀಕರಿಸಿದ್ದಾರೆ. ಬಳಿ ಮರೆವಣಿಗೆ ಮೂಲಕ ಅಯ್ಯಪ್ಪ ಸನ್ನಿಧಾನಕ್ಕೆ ಬಂದ ತಿರುವಾಭರಣಕ್ಕೆ ಪೂಜೆ ಸಲ್ಲಿಲಾಯಿತು. ಪೂಜೆ ನೇರವೇರಿದ ಬೆನ್ನಲ್ಲೇ ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರಜ್ಯೋತಿಯ ದರುಶನವಾಗಿದೆ.