ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡಲ ಪೂಜೆ ಸಂಭ್ರಮದ ಬಳಿಕ ಬಾಗಿಲು ಮುಚ್ಚಿದ್ದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಿ ನಾಳೆ ಮತ್ತೆ ಭಕ್ತರಿಗಾಗಿ ತೆರೆದುಕೊಳ್ಳಲಿದೆ.
ಪವಿತ್ರ ಮಕರಜ್ಯೋತಿಯ ಪೂರ್ವಭಾವಿಯಾಗಿ ಜ.13 ಹಾಗೂ ಜ.14ರಂದು ನಡೆಯುವ ಪ್ರಸಾದ ಶುದ್ಧ ಕ್ರಿಯೆ, ಬಿಂಬ ಶುದ್ಧ ಕ್ರಿಯೆ ಮೊದಲಾದ ವಿವಿಧಿವಿಧಾನಗಳಿಗಾಗಿ ಸಿದ್ಧತೆಗಳು ಈಗಾಗಲೇ ಅಯ್ಯಪ್ಪ ಕ್ಷೇತ್ರದಲ್ಲಿ ಆರಂಭಗೊಂಡಿದೆ. ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.