September 26, 2026
Saturday, September 26, 2026
spot_img

ಮಧ್ಯಾಹ್ನದ ಊಟಕ್ಕೆ ಸ್ಪೀಡಾಗಿ ಮಾಡಿ ನಾಟಿ ಸ್ಟೈಲ್‌ ಮೊಟ್ಟೆ ಕರ್ರಿ, ಟೇಸ್ಟ್‌ ಮಾತ್ರ ಅದ್ಭುತ

ಸಾಮಾಗ್ರಿಗಳು

ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಕಾಳು
ಹುರಿಗಡ್ಲೆ
ಗಸಗಸೆ
ಕಾಯಿ
ಮೊಟ್ಟೆ
ಎಣ್ಣೆ
ಉಪ್ಪು

ಮಾಡುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ ಹಾಕಿ, ಇದಕ್ಕೆ ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಕಾಳು ಹಾಕಿ ಬಾಡಿಸಿ
ಆನಂತರ ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ. ಇದು ಮೆತ್ತಗಾದ ನಂತರ ಕೊತ್ತಂಬರಿ ಸೊಪ್ಪು, ಕಾಯಿ, ಹುರಿಗಡ್ಲೆ ಹಾಗೂ ಗಸಗಸೆ ಹಾಕಿ ಮಿಕ್ಸ್‌ ಮಾಡಿ
ಎಲ್ಲವೂ ತಣ್ಣಗಾದ ಬಳಿಕ ಮಿಕ್ಸಿ ಮಾಡಿ ನುಣುಪಾಗಿ ರುಬ್ಬಿಕೊಳ್ಳಿ
ಆನಂತರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಈ ಮಿಶ್ರಣ ಹಾಕಿ, ನೀರು ಹಾಗೂ ಉಪ್ಪು ಹಾಕಿ ಹದ ಚೆಕ್‌ ಮಾಡಿ
ಆನಂತರ ಒಂದೊಂದಾಗಿ ಮೊಟ್ಟೆಯನ್ನು ಸಾರಿನೊಳಗೆ ಬಿಡಿ. ಐದು ನಿಮಿಷ ಮುಚ್ಚಿ ಹಾಗೇ ಬೇಯಿಸಿ
ನಂತರ ಮೊಟ್ಟೆಯನ್ನು ಒಮ್ಮೆ ತಿರುಗಿಸಿ, ಮೊಟ್ಟೆ ಬೆಂದ ನಂತರ ಆಫ್‌ ಮಾಡಿದ್ರೆ ಕರ್ರಿ ರೆಡಿ
ಇದನ್ನು ಅನ್ನ, ಚಪಾತಿ, ರೊಟ್ಟಿ, ಮುದ್ದೆಯ ಜೊತೆ ಸವಿಯಬಹುದು

Must Read