ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬ ಹರಿದಿನಗಳಲ್ಲಿ ಪಾಯಸ ಮಾಡುವುದು, ಸವಿಯುವುದು ಒಂದು ಸಂಭ್ರಮವೇ ಸರಿ. ಅನೇಕ ಬಾರಿ ಶ್ಯಾವಿಗೆ ಬಳಸಿ ಪಾಯಸ ಮಾಡುತ್ತೇವೆ. ಆದರೆ ಊಟ ಆಗುವುದರೊಳಗೆ ಪಾಯಸ ಗಟ್ಟಿಯಾಗಿ ಬಿಡುತ್ತದೆ. ಇದರಿಂದ ಪಾಯಸದ ಸವಿ ಸವಿಯುವುದು ಕಷ್ಟವಾಗುತ್ತದೆ. ಈ ವಿಧಾನದಲ್ಲಿ ಶ್ಯಾವಿಗೆ ಪಾಯಸ ಮಾಡಿದರೆ ಗಟ್ಟಿ ಆಗುವುದೇ ಇಲ್ಲ. ಯಾವ ಹೊತ್ತಲ್ಲಿ ಬೇಕಾದರೂ ಪಾಯಸವನ್ನು ನೀವು ಸವಿಯಬಹುದು.
ಬೇಕಾಗುವ ಸಾಮಗ್ರಿಗಳು:
ಒಂದು ಬಟ್ಟಲು ಶ್ಯಾವಿಗೆ, ಅರ್ಧ ಕಪ್ ತುಪ್ಪ, ಎರಡು ಕಪ್ ಸಕ್ಕರೆ, ಎರಡು ಬಟ್ಟಲು ನೀರು, ಒಂದು ಲೀಟರ್ ಹಾಲು, ಏಲಕ್ಕಿ ಪುಡಿ ಸ್ವಲ್ಪ, ಕೇಸರಿ, ಗೋಡಂಬಿ, ದ್ರಾಕ್ಷಿ, ಬಾದಾಮಿ.
ಮಾಡುವ ವಿಧಾನ:
ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾಯುತ್ತಿದ್ದಂತೆಯೇ ಗೋಡಂಬಿ ಮತ್ತು ಬಾದಾಮಿಯನ್ನು, ದ್ರಾಕ್ಷಿ ಹಾಕಿ ಪ್ರೈ ಪ್ರತ್ಯೇಕವಾಗಿ ತೆಗೆದಿಡಿ. ಅದೇ ಬಾಣಲೆಯಲ್ಲಿ ಶಾವಿಗೆಯನ್ನು ಹಾಕಿಸಣ್ಣ ಹುರಿಯಲ್ಲಿ ಕೆಂಪಗಾಗುವ ವರೆಗೂ ಹುರಿದುಕೊಳ್ಳಿ. ಪ್ರತ್ಯೇಕ ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಇಡಿ. ಚೆನ್ನಾಗಿ ಕಾದ ನೀರಿಗೆ ಹುರಿದ ಶ್ಯಾವಿಗೆ ಸೇರಿಸಿ ಬೇಯಲು ಬಿಡಿ. ಹಾಲು ಸೇರಿಸಿ, ಒಂದು ಕಪ್ ಸಕ್ಕರೆ ಸೇರಿಸಿ ಮಿಶ್ರಮಾಡಿ ಕುದಿಸಿರಿ. ಪಾತ್ರೆಯ ತಳ ಹಿಡಿಯದಂತೆ ಗೊಟಾಯಿಸಿಕೊಳ್ಳಿ. ಸರಿಯಾಗಿ ಕುದಿಯುತ್ತಿದ್ದಂತೆಯೇ ಕೇಸರಿ ಸೇರಿಸಿ. ಏಲಕ್ಕಿ ಪುಡಿ ಸೇರಿಸಿ. ಸಿಹಿ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. ನಂತರ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ ಸೇರಿಸಿ. ಬಿಸಿ ಬಿಸಿ ಪಾಯಸ ರುಚಿ ರುಚಿಯಾಗಿರುತ್ತದೆ.