ಗೋಲ್ಡನ್ ಮಿಲ್ಕ್ ಅಂದ್ರೆ ಬಾದಾಮಿ ಪೌಡರ್ ಅಂಗಡಿಯಿಂದ ತರಬೇಕಿಲ್ಲ. ಆರೋಗ್ಯಕರವಾಗಿ ಅದನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಇದನ್ನು ನಿತ್ಯವೂ ಹಾಲಿಗೆ ಹಾಕಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಇಮ್ಯುನಿಟಿ ಹೆಚ್ಚಾಗುತ್ತದೆ. ಹೇಗೆ ಮಾಡೋದು ನೋಡಿ..
ಒಂದು ಬಾಣಲೆಗೆ ಬಾದಾಮಿ ಹಾಗೂ ಏಲಕ್ಕಿ ಹಾಕಿ ಬಾಡಿಸಿ
ಬಿಸಿಯಾದ ಬಾದಾಮಿ ನ್ಯಾಚುರಲ್ ಆಗಿಯೇ ತಣ್ಣಗಾಗಲು ಬಿಡಿ
ನಂತರ ಇದನ್ನು ಮಿಕ್ಸಿಗೆ ಹಾಕಿ, ಜೊತೆಗೆ ಅರಿಶಿಣ ಪುಡಿ, ಕೇಸರಿ ದಳ ಹಾಕಿ
ಜೊತೆಗೆ ಬೆಲ್ಲ ಬೇಕಿದ್ದಲ್ಲಿ ಹಾಕಿ, ಸಕ್ಕರೆ ತಿನ್ನಲು ಬಯಸುವವರಿಗೆ ಸಕ್ಕರೆ ಹಾಕಿ ಮಿಕ್ಸಿ ಮಾಡಿಕೊಂಡ್ರೆ ಬಾದಾಮಿ ಪುಡಿ ರೆಡಿ