ನನ್ನ ಮಗನನ್ನು ಸೇಫ್ ಆಗಿ ಕರೆ ತರಲು ಸಕಾ೯ರ ವ್ಯವಸ್ಥೆ ಮಾಡಲಿ: ವಿದ್ಯಾರ್ಥಿ ತಂದೆ ಅರವಿಂದ್ ಜಾಮಗೊಂಡ ಆಳಲು

ಹೊಸದಿಗಂತ ವರದಿ,ಕಲಬುರಗಿ:

ಉಕ್ರೇನ್, ನ ಖಾಕೀ೯ವ್,ನಲ್ಲಿ ಸಿಲುಕಿರುವ ನನ್ನ ಮಗನಾದ ಮಲ್ಲಿನಾಥ ಜಾಮಗೊಂಡ, ನನ್ನು ಸುರಕ್ಷಿತವಾಗಿ ಭಾರತಕ್ಕೆ ತರುವ ನಿಟ್ಟಿನಲ್ಲಿ ಸಕಾ೯ರ ಕ್ಕೆ ವಿದ್ಯಾರ್ಥಿ ಯ ತಂದೆ ಅರವಿಂದ್ ಜಾಮಗೊಂಡ ಆಗ್ರಹಿಸಿದ್ದಾರೆ.
ನಗರದ ಭಾಗ್ಯವಂತಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾದ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ಅವರು, ಎಂಬಿಬಿಎಸ್ ವಿದ್ಯಾಬ್ಯಾಸ ಮಾಡುತ್ತಿದ್ದು, ಖಾಕೀ೯ನ್,ನ ಹೊರವಲಯದ ಪ್ರದೇಶದಲ್ಲಿ ಸಿಲುಕಿದ್ದಾನೆ. ನಿನ್ನೆ ಯ ದಿನ ಸುಮಾರು ಹನ್ನೆರಡು ಕಿಲೋ ಮೀಟರ್ ನಡೆದುಕೊಂಡು ಸೇಫ್ ಆಗಿ ಖಾಕೀ೯ವ ನಗರಕ್ಕೆ ಹೋಗಿದ್ದಾನೆ ಎಂದರು.
ರೈಲು ನಿಲ್ದಾಣ ಕ್ಕೆ ಹೋದರು ಅಲ್ಲಿಯ ಸ್ಥಳೀಯರು ನನ್ನ ಮಗನನ್ನು ರೈಲು ಹತ್ತಲು ಬಿಡುತ್ತಿಲ್ಲ. ಹೀಗಾಗಿ ಬೇರೆ ಕಡೆಯ ಜಾಗದಲ್ಲಿ ಇರುವುದಾಗಿ ಅವರ ತಂದೆ ಅರವಿಂದ ಅವರಿಗೆ ದೂರವಾಣಿ ಮೂಲಕ ಮಗ ಮಲ್ಲಿನಾಥ ಅಳಲನ್ನು ತೋಡಿಕೋಂಡಿದ್ದಾನೆ.
ಭಾರತದ ರಾಯಭಾರಿ ಕಚೇರಿಯವರು ಯಾರು ಕೂಡ ಸಹಾಯ ಮಾಡುತ್ತಿಲ್ಲ.ದೂರವಾಣಿ ಮಾಡಿದರೂ,ರಿಸಿವ ಮಾಡುತ್ತಿಲ್ಲ.ಹೀಗಾಗಿ ಅಲ್ಲಿಯ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಸಕಾ೯ರ ಇನ್ನಷ್ಟು ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!